ದಕ್ಷಿಣ ಭಾರತದ ಮೊದಲ ಪ್ರವೇಶ – ನಿರ್ಗಮನ ನಿರ್ಬಂಧಿತ ಹೆದ್ದಾರಿ ಎಂಬ ಹೆಗ್ಗಳಿಕೆ ಹೊಂದಿರುವ ಬೆಂಗಳೂರು – ಮೈಸೂರು ದಶಪಥದಲ್ಲಿ ಬರುವ ಪ್ರತಿಯೊಂದು ಹಳ್ಳಿಗೂ ‘ಸ್ಕೈ ವಾಕ್’ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತೀರ್ಮಾನಿಸಿದೆ. ಈ ಮೂಲಕ ಸ್ಥಳೀಯರು, ರಸ್ತೆ ದಾಟುವಾಗ ಸಂಭವಿಸುವ ಅಪಘಾತ ತಡೆಗಟ್ಟಬಹುದು ಎಂದು ಚಿಂತಿಸಲಾಗಿದೆ.
118 ಕಿಲೋಮೀಟರ್ ಉದ್ದದ ಈ ಎಕ್ಸ್ಪ್ರೆಸ್ ವೇ ನಲ್ಲಿ ಹೆದ್ದಾರಿಯ ಎರಡೂ ಕಡೆ ಬೇಲಿ ನಿರ್ಮಿಸಿ ರಸ್ತೆ ದಾಟುವುದನ್ನು ಸಂಪೂರ್ಣವಾಗಿ ನಿರ್ಬಧಿಸಲಾಗಿದ್ದರೂ ಸಹ ಸ್ಥಳೀಯರು ಬೇಲಿ ಮುರಿದು ರಸ್ತೆ ದಾಟಿದ ಘಟನೆಗಳು ನಡೆದಿದ್ದು, ಇದೇ ಕಾರಣಕ್ಕೆ ಸಂಭವಿಸಿದ ಅಪಘಾತದಲ್ಲಿ ಹಲವರು ಮೃತಪಟ್ಟಿದ್ದರು.
ಈ ಹಿನ್ನೆಲೆಯಲ್ಲಿ ಪ್ರತಿ ಹಳ್ಳಿಗೂ ಸ್ಕೈ ವಾಕ್ ನಿರ್ಮಿಸಲು ತೀರ್ಮಾನಿಸಲಾಗಿದ್ದು, ಹೀಗಾಗಿ ಮಂಡ್ಯ ಜಿಲ್ಲಾ ವ್ಯಾಪ್ತಿಯ 55 ಕಿ.ಮೀ. ಉದ್ದದ ಹೆದ್ದಾರಿಯಲ್ಲಿ 18 ಕಡೆ, ಮೈಸೂರು, ರಾಮನಗರ, ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ 21 ಕಡೆ ಸ್ಥಳ ಗುರುತಿಸಲಾಗಿದ್ದು, ಭೂಸ್ವಾಧೀನಕ್ಕಾಗಿ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ.