ಬೆಂಗಳೂರು: ಬಿಜೆಪಿಯಿಂದ ಟಿಕೆಟ್ ಕೊಟ್ಟರೆ ನಿಲ್ಲುತ್ತೇನೆ, ಇಲ್ಲವಾದರೆ ಇಲ್ಲ ಕವಲು ದಾರಿಗಳು ಇರುತ್ತವೆ ಎಂದು ಹೇಳುವ ಮೂಲಕ ವಸತಿ ಸಚಿವ ವಿ.ಸೋಮಣ್ಣ ಮಾರ್ಮಿಕವಾಗಿ ನುಡಿದಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿ.ಸೋಮಣ್ಣ, ಏನು ಹೇಳಬೇಕು, ಎಲ್ಲಿ ಹೆಳಬೇಕು ಹೇಳಿದೀನಿ. ಬಿಜೆಪಿ ಟಿಕೆಟ್ ಕೊಟ್ರೆ ನಿಂತ್ಕೋತೀನಿ. ಇಲ್ಲದಿದ್ದರೆ ಇಲ್ಲ. ಕವಲುದಾರಿಗಳು ಇರುತ್ತವೆ ನಾನೇನೂ ಸನ್ಯಾಸಿಯಲ್ಲ ಎಂದಿದ್ದಾರೆ.
ನಾನು ಅಸಮಾಧಾನವಿದೆ ಎಂದು ಯಾವತ್ತಾದರೂ ಹೇಳಿದ್ದೇನಾ? ಮಗನಿಗೆ ಟಿಕೆಟ್ ಕೇಳಿದ್ದೀನಾ? ಅವಕಾಶ, ಹಣೆಬರಹ ಇದ್ದರೆ ಅವನಿಗೆ ಟಿಕೆಟ್ ಸಿಗುತ್ತದೆ. ನಾನು ಯಾವತ್ತೂ ಮಕ್ಕಳನ್ನು ರಾಜಕಾರಣಕ್ಕೆ ತಂದವನಲ್ಲ. ಬೇರೆಯವರ ಮಕ್ಕಳಿಗೆ ಟಿಕೆಟ್ ಇಲ್ಲ ಅಂದ್ರೆ ನಮಗೂ ಬೇಡ ಎಂದರು.
ನಾನು ಕಾಂಗ್ರೆಸ್ ಗೆ ಹೋಗುತ್ತೇನೆ ಎಂದು ಕೆಲವರ ಮನಸ್ಸಿನಲ್ಲಿದೆ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ನಾವು ಸ್ನೇಹಿತರು. ಅವರ ಕೆಲಸ ಅವರು ಮಾಡ್ತಾರೆ, ನನ್ನ ಕೆಲಸ ನಾನು ಮಾಡ್ತೇನೆ ಎಂದರು.