ಚಿಕ್ಕಮಗಳೂರು: ಕನ್ನಡಿಗರಿಗೆ ಟಿಪ್ಪು ನೆಂಟನಲ್ಲ, ಆಕ್ರಮಣಕಾರ ಎಂಬುದು ನೆನಪಿರಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ.ರವಿ, ಇತಿಹಾಸ ಅರ್ಥೈಸಿಕೊಳ್ಳದವರು ಎಡಬಿಡಂಗಿಯಾಗಿ ಮಾತನಾಡುತ್ತಾರೆ. ಮೈಸೂರು ಒಡೆಯರ್ ಗೆ ಮೋಸ ಮಾಡಿದ್ದು ಟಿಪ್ಪು. ಅರಸರಿಗೆ ನಿಷ್ಠಾವಂತರಾಗಿದ್ದವರನ್ನು ಟಿಪ್ಪು ಹತ್ಯೆ ಮಾಡಿದ್ದ ಎಂದು ವಾಗ್ದಾಳಿ ನಡೆಸಿದ್ದಾರೆ.
ಟಿಪ್ಪು ಕನ್ನಡ ವಿರೋಧಿಯಾಗಿದ್ದ. ಅದಕ್ಕೆ ಪಾರ್ಸಿ ಭಾಷೆ ಹೇರಿದ್ದನು. ಇದನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದು ಕಿಡಿಕಾರಿದ್ದಾರೆ.