BIG NEWS: ಅವರನ್ನು ಮಾಗಡಿ ರಂಗನಾಥಸ್ವಾಮಿಯೇ ನೋಡಿಕೊಳ್ತಾನೆ; ಬಾಲಕೃಷ್ಣ ವಿರುದ್ಧ HDK ಪರೋಕ್ಷ ವಾಗ್ದಾಳಿ

ರಾಮನಗರ: ರಾಮನಗರ, ಮಾಗಡಿ ನನ್ನನ್ನು ರಾಜಕೀಯವಾಗಿ ಬೆಳೆಸಿದ ಕ್ಷೇತ್ರ. ನಾವು 38 ಸೀಟ್ ಗಳನ್ನು ಇಟ್ಟುಕೊಂಡು ಸರ್ಕಾರ ರಚನೆ ಮಾಡಿದ್ವಿ. ಕರ್ನಾಟಕ ಜನರ ಆಶಿರ್ವಾದದಿಂದ ಮುಖ್ಯಮಂತ್ರಿಯಾಗಿದ್ದೆ. ಆರ್ಥಿಕ ಬಲ ಇದ್ದಿದ್ದರೆ ಇನ್ನು ಹೆಚ್ಚಿನ ಸೀಟ್ ಗೆಲ್ಲುತ್ತಿದ್ದೆವು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ರಾಮನಗರದಲ್ಲಿ ಮಾತನಾಡಿದ ಕುಮಾರಸ್ವಾಮಿ, ಮಾಗಡಿ ಕ್ಷೇತ್ರದಲ್ಲಿ ಕೆಲವರು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಅವರನ್ನು ಮಾಗಡಿ ರಂಗನಾಥಸ್ವಾಮಿಯೆ ನೋಡಿಕೊಳ್ಳುತ್ತಾನೆ ಎಂದು ಪರೋಕ್ಷವಾಗಿ ಬಾಲಕೃಷ್ಣ ವಿರುದ್ಧ ವಾಗ್ದಾಳಿ ನಡೆಸಿದರು.

ಆರ್ಥಿಕವಾಗಿ ಇದ್ದರೆ ನಾವು 150-160 ಸ್ಥಾನಗಳನ್ನು ಗೆಲ್ಲುತ್ತಿದ್ದೆವು. ಈ ಚುನಾವಣೆಯಲ್ಲಿ 80-90 ಕ್ಷೇತ್ರಗಳಲ್ಲಿ ಗೆಲ್ಲುವುದು ಗ್ಯಾರಂಟಿ. ಕಾಂಗ್ರೆಸ್ ಹಾಗೂ ಬಿಜೆಪಿಗಿಂತಲೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುತ್ತೇವೆ. ಪಂಚರತ್ನ ಯೋಜನೆಗಳನ್ನು ಜಾರಿಗೊಳಿಸಬೇಕೆಂದರೆ ಜೆಡಿಎಸ್ ಗೆ ಮತ ನೀಡಿ ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read