ಬಿಡುವಿಲ್ಲದ ಜೀವನಶೈಲಿ ನಮ್ಮನ್ನು ಸಾಕಷ್ಟು ಒತ್ತಡಕ್ಕೆ ಈಡುಮಾಡುತ್ತದೆ. ಸಣ್ಣ-ಪುಟ್ಟ ವಿಷಯಗಳಿಗೆಲ್ಲ ಜನರು ತುಂಬಾ ಯೋಚಿಸುತ್ತಾರೆ. ಯೋಚಿಸಲು ಯೋಗ್ಯವಾಗಿಲ್ಲದ ವಿಷಯಗಳ ಬಗ್ಗೆ ಕೂಡ ವಿಮರ್ಷೆ ಮಾಡುತ್ತಲೇ ಇರುತ್ತಾರೆ. ಸಣ್ಣ ವಿಷಯಗಳ ಬಗ್ಗೆ ಹೆಚ್ಚು ಯೋಚಿಸುವ ಅಭ್ಯಾಸವು ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಅದರಿಂದ ಅನೇಕ ಅನಾನುಕೂಲಗಳೂ ಇವೆ.
ಸಣ್ಣಪುಟ್ಟ ವಿಷಯಗಳನ್ನು ಮನಸ್ಸಿಗೆ ಹಚ್ಚಿಕೊಳ್ಳುವವರು ಅನೇಕರಿದ್ದಾರೆ. ಅತಿಯಾಗಿ ಯೋಚಿಸುವುದು ನಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಇದರಿಂದಾಗಿ ನೀವು ಖಿನ್ನತೆಗೆ ಬಲಿಯಾಗಬಹುದು.
ಬಹಳಷ್ಟು ಯೋಚಿಸುವ ಜನರು ಏಕಾಂಗಿಯಾಗಿರಲು ಬಯಸುತ್ತಾರೆ. ಅವರು ಯಾರೊಂದಿಗೂ ಬೆರೆಯಲು ಇಷ್ಟಪಡುವುದಿಲ್ಲ. ಅತಿಯಾಗಿ ಯೋಚಿಸುವುದು ಮನಸ್ಸಿನ ಧನಾತ್ಮಕ ಶಕ್ತಿಯನ್ನು ಸಂಪೂರ್ಣವಾಗಿ ನಾಶಪಡಿಸುತ್ತದೆ.
ಅಂಥವರ ಆತ್ಮವಿಶ್ವಾಸದ ಮಟ್ಟವೂ ತೀರಾ ಕಡಿಮೆ. ಅವರು ತಿಳಿದಿರುವ ಅಥವಾ ತಿಳಿದಿಲ್ಲದ ಜನರಿಂದ ದೂರ ಓಡಿಹೋಗಲು ಪ್ರಾರಂಭಿಸುತ್ತಾರೆ. ಯಾರ ಬಗ್ಗೆ ಬೇಕಾದರೂ ಯೋಚಿಸಲು ಪ್ರಾರಂಭಿಸುತ್ತಾರೆ.
ಅತಿಯಾಗಿ ಯೋಚಿಸುವವರು ಸರಿಯಾಗಿ ನಿದ್ರೆ ಮಾಡುವುದಿಲ್ಲ ಮತ್ತು ಹಸಿವನ್ನು ಅನುಭವಿಸುವುದಿಲ್ಲ. ಇವರ ಮನಸ್ಸಿನಲ್ಲಿ ಯಾರನ್ನಾದರೂ ಕಳೆದುಕೊಳ್ಳುವ ಭಯ ಯಾವಾಗಲೂ ಇರುತ್ತದೆ. ಅತಿಯಾಗಿ ಯೋಚಿಸುವ ಜನರು ತಮಗೂ ಹಾನಿ ಮಾಡಿಕೊಳ್ಳುತ್ತಾರೆ.