alex Certify ಪ್ರಾಣ ಪ್ರತಿಷ್ಠೆ: ಜ. 22 ರಂದು ಜಾಮಿಯಾ ಇಸ್ಲಾಮಿಯಾ ವಿವಿ ರಜೆ ಘೋಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಾಣ ಪ್ರತಿಷ್ಠೆ: ಜ. 22 ರಂದು ಜಾಮಿಯಾ ಇಸ್ಲಾಮಿಯಾ ವಿವಿ ರಜೆ ಘೋಷಣೆ

ನವದೆಹಲಿ: ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯವು ಅಯೋಧ್ಯೆಯಲ್ಲಿ ರಾಮ್ ಲಲ್ಲಾ ಪ್ರಾಣ್ ಪ್ರತಿಷ್ಠಾ ನಿಮಿತ್ತ ಜನವರಿ 22 ರಂದು ಮಧ್ಯಾಹ್ನ 2:30 ರವರೆಗೆ ಅರ್ಧ ದಿನ ಮುಚ್ಚಿರುತ್ತದೆ.

JMI ವಿಶ್ವವಿದ್ಯಾನಿಲಯ ಮತ್ತು ಜಾಮಿಯಾ ಶಾಲೆಗಳನ್ನು ಒಳಗೊಂಡಂತೆ ಅದರ ನಿರ್ವಹಣೆಯ ಸಂಸ್ಥೆಗಳು/ಕೇಂದ್ರಗಳು/ಕಚೇರಿಗಳನ್ನು ಜನವರಿ 22 ರಂದು ಅರ್ಧ ದಿನ (ಮಧ್ಯಾಹ್ನ 2.30 ರವರೆಗೆ) ಮುಚ್ಚಲಾಗುವುದು ಎಂದು ಉಪಕುಲಪತಿ ಸುತ್ತೋಲೆ ಹೊರಡಿಸಿದ್ದಾರೆ.

“ಪ್ರಾಣ ಪ್ರತಿಷ್ಠಾ” ಕಾರ್ಯಕ್ರಮವು ಜನವರಿ 22 ರಂದು ನಡೆಯಲಿದೆ. ಮಹಾಮಸ್ತಕಾಭಿಷೇಕ ಸಮಾರಂಭವು ಮಧ್ಯಾಹ್ನ 12.20 ಕ್ಕೆ ಪ್ರಾರಂಭವಾಗಿ 1 ಗಂಟೆಗೆ ಕೊನೆಗೊಳ್ಳುವ ನಿರೀಕ್ಷೆಯಿದೆ. ನಂತರ ಮೋದಿ ಅವರು ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಸರ್ಕಾರಿ ನೌಕರರು ದೂರದರ್ಶನದಲ್ಲಿ ಕಾರ್ಯಕ್ರಮ ವೀಕ್ಷಿಸಲು, ಸ್ಥಳೀಯ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅನುಕೂಲವಾಗುಂತೆ ಹಲವಾರು ರಾಜ್ಯಗಳು ಜ. 22ರಂದು ಅರ್ಧ ದಿನ, ಕೆಲವೆಡೆ ಇಡೀ ದಿನ ಸಾರ್ವಜನಿಕ ರಜೆ ಘೋಷಿಸಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...