ಸದ್ಯ ಎಐ ಫೋಟೋಗಳು ಭಾರೀ ಟ್ರೆಂಡಿಂಗ್ನಲ್ಲಿವೆ. ಈಗಾಗಲೇ ಸಾಕಷ್ಟು ಎಐ ಆ್ಯಂಕರ್ಗಳು, ಫೋಟೋಗಳನ್ನು ನಾವು ನೋಡಿದ್ದೇವೆ. ಇದೀಗ ಕಲಾವಿದ ಪ್ರತೀಕ್ ಅರೋರಾ ಎಂಬವರು ಇದೇ ಎಐ ಟೆಕ್ನಾಲಜಿ ಬಳಸಿಕೊಂಡು ಮುಂಬೈನ ಆಕಾಶದ ಮೇಲೆ ಸುಂದರವಾದ ಕಲಾಕೃತಿ ರಚಿಸಿದ್ದಾರೆ.
ವಾಣಿಜ್ಯನಗರಿ ಮುಂಬೈನಲ್ಲಿ ಜೀವನ ಕಟ್ಟಿಕೊಳ್ಳೋಕೆ ಬರೋ ಅನೇಕರು ಇಲ್ಲಿಯ ಖಾಯಂ ನಿವಾಸಿಗಳಾಗಿಬಿಡ್ತಾರೆ. ಹೀಗಾಗಿ ಇಲ್ಲಿ ನಿಮಗೆ ಒಂದು ತುಂಡು ಜಾಗ ಸಿಗೋದು ಭಾರೀ ಕಷ್ಟ. ಈ ಪರಿಸ್ಥಿತಿಯ ನಡುವೆ ಪ್ರತೀಕ್ ಅರೋರಾ ಆಕಾಶದಲ್ಲಿ ತೇಲುವ ಅಪಾರ್ಟ್ಮೆಂಟ್ ನ ಕಲಾಕೃತಿ ರಚಿಸಿದ್ದಾರೆ. ಇದು ಮುಂಬೈನ ಭವಿಷ್ಯವನ್ನು ಹೇಳ್ತಿದೆ ಅಂತಾ ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಗಗನಕ್ಕೇರುತ್ತಿರುವ ಪ್ರಾಪರ್ಟಿ ಬೆಲೆಗಳು ಹಾಗೂ ಸ್ಥಳಾವಕಾಶದ ನಿರ್ಬಂಧಗಳಿಗೆ ಹೆಸರುವಾಸಿಯಾದ ಮುಂಬೈ, ಅನೇಕ ಸಮಯದಿಂದ ರಿಯಲ್ ಎಸ್ಟೇಟ್ ಆವಿಷ್ಕಾರದ ಕೇಂದ್ರವಾಗಿದೆ.
ಕಲಾಕೃತಿಯಲ್ಲಿ ತೋರಿಸಿರುವ ಮನೆಗಳು ಗಾಜಿನ ಕಿಟಕಿಗಳು ಮತ್ತು ಬಾಗಿಲುಗಳೊಂದಿಗೆ ಆಧುನಿಕ ಚೌಕಟ್ಟನ್ನು ಹೊಂದಿವೆ. ಆದರೆ ಅವೆಲ್ಲವೂ ಅಂತರಿಕ್ಷ ನೌಕೆಯಂತಹ ರಚನೆಯನ್ನು ಹೋಲುತ್ತವೆ.