
ಸಿಂಪಲ್ ಸುನಿ ನಿರ್ದೇಶನದ ‘ಒಂದು ಸರಳ ಪ್ರೇಮ ಕಥೆ’ ಚಿತ್ರ ಎಷ್ಟು ಬಾರಿ ನೋಡಿದರೂ ನೋಡಬೇಕೆನ್ನುವಷ್ಟು ಪ್ರೇಕ್ಷಕರ ಗಮನ ಸೆಳೆದಿತ್ತು. ಒಂದರ ಮೇಲೊಂದು ತಿರುವುಗಳು ಮತ್ತು ಸುಮಧುರವಾದ ಹಾಡುಗಳನ್ನು ಸಿನಿಮಾ ಅಂತ್ಯದವರೆಗೂ ನೋಡಬಹುದಾಗಿದೆ. ಈ ಚಿತ್ರ ಇದೀಗ ಕಿರುತೆರೆಯಲ್ಲಿ ಪ್ರಸಾರವಾಗಲಿದ್ದು, ಇದೇ ಏಪ್ರಿಲ್ 14 ರಂದು ರಾತ್ರಿ 8 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ವೀಕ್ಷಿಸಬಹುದಾಗಿದೆ.
ಈ ಚಿತ್ರದಲ್ಲಿ ವಿನಯ್ ರಾಜಕುಮಾರ್, ಮಲ್ಲಿಕಾ ಸಿಂಗ್ ಮತ್ತು ಸ್ವಾತಿಷ್ಠ ಪ್ರಮುಖ ಪಾತ್ರದಲ್ಲಿದ್ದು, ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧು ಕೋಕಿಲ, ಕಾರ್ತಿಕ್ ಮಹೇಶ್, ರಾಘವೇಂದ್ರ ರಾಜ್‌ಕುಮಾರ್, ಶ್ವೇತಾ ಶ್ರೀವಾತ್ಸವ್, ಉಳಿದ ಪಾತ್ರ ವರ್ಗದಲ್ಲಿದ್ದಾರೆ. ರಾಮ್ ಮೂವೀಸ್ ಬ್ಯಾನರ್ ನಲ್ಲಿ ಮೈಸೂರ್ ರಮೇಶ್ ನಿರ್ಮಾಣ ಮಾಡಿದ್ದಾರೆ. ಆದಿ ಸಂಕಲನ, ಕಾರ್ತಿಕ್ ಮತ್ತು ಸಭಾ ಕುಮಾರ್ ಛಾಯಗ್ರಾಹಣವಿದೆ. ವೀರ ಸಮರ್ಥ್ ಸಂಗೀತ ಸಂಯೋಜನೆ ನೀಡಿದ್ದಾರೆ.
