ಅಳಿಯನ ಜೊತೆ ಓಡಿ ಹೋಗಿದ್ಲು ನಾಲ್ಕು ಮಕ್ಕಳ ತಾಯಿ; ಆ ಕತೆ ಮುಂದೇನಾಯ್ತು ಕೇಳಿ….!

ಕೆಲ ತಿಂಗಳ ಹಿಂದೆ ನವದೆಹಲಿಯಿಂದ ನಾಲ್ಕು ಮಕ್ಕಳ ತಾಯಿಯೊಬ್ಬಳು ವರಸೆಯಲ್ಲಿ ಅಳಿಯನಾಗಬೇಕಾದ ತನ್ನ ಪತಿಯ ಸಂಬಂಧಿ ಜೊತೆ ಪರಾರಿಯಾಗಿದ್ದಳು. ಪತ್ನಿ ಹಾಗೂ ತನ್ನ ನಾಲ್ವರು ಮಕ್ಕಳು ಕಾಣೆಯಾಗಿದ್ದ ಕಾರಣಕ್ಕೆ ಪೊಲೀಸ್ ಠಾಣೆಯಲ್ಲಿ ಪತಿ ಪ್ರಕರಣ ದಾಖಲಿಸಿದ್ದು, ಆಮೇಲೆ ಏನಾಯ್ತು ಎಂಬುದರ ಮುಂದಿನ ಭಾಗದ ಸ್ಟೋರಿ ಇಲ್ಲಿದೆ.

ಪ್ರಕರಣದ ವಿವರ: ಬಂಕಾ ಬಿಹಾರ್ ನಿವಾಸಿಯಾದ ಮಹಿಳೆಯ ಪತಿ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದು, ನಿರುದ್ಯೋಗಿಯಾಗಿ ಊರಿನಲ್ಲಿ ಅಲೆಯುತ್ತಿದ್ದ ತನ್ನ ಅಳಿಯನನ್ನು ಕರೆದುಕೊಂಡು ಹೋಗಿ ಕೆಲಸ ಕೊಡಿಸಿದ್ದಲ್ಲದೆ ಮನೆಯಲ್ಲಿಯೇ ಇರಿಸಿಕೊಂಡಿದ್ದ. ಈ ಸಂದರ್ಭದಲ್ಲಿ ಆತನ ಪತ್ನಿಗೆ ಅಳಿಯನ ಜೊತೆ ಪ್ರೀತಿ ಮೂಡಿದೆ. ಇವರಿಬ್ಬರೂ ತಾನಿಲ್ಲದ ಸಂದರ್ಭದಲ್ಲಿ ಸಂಧಿಸುತ್ತಿದ್ದ ವಿಷಯ ತಿಳಿದ ಪತಿ, ಅಳಿಯನನ್ನು ಹೊರ ಹಾಕಿದ್ದ.

ಬಳಿಕ ಇವರಿಬ್ಬರೂ ಪರಾರಿಯಾಗಿದ್ದು, ಮಹಿಳೆ ತನ್ನ 4 ಮಕ್ಕಳನ್ನು ಸಹ ಕರೆದುಕೊಂಡು ಹೋಗಿದ್ದಳು. ಪುಣೆಯಲ್ಲಿ ನೆಲೆಸಿದ್ದ ಇವರುಗಳು ಈಗ ಮತ್ತೆ ಬಂಕಾ ಬಿಹಾರ್ ಗೆ ಬಂದು ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ವಿಷಯ ತಿಳಿದು ಆಗಮಿಸಿದ ಪತಿ ಈಗ ರಂಪಾಟ ನಡೆಸಿದ್ದಾನೆ. ಪ್ರಕರಣ ಈಗ ಸ್ಥಳೀಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಎಲ್ಲರೂ ವಯಸ್ಕರಾಗಿರುವ ಕಾರಣ ಮುಂದೇನು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರು ಯೋಚನೆ ಮಾಡುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read