
ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಅನೇಕ ರೀತಿಯ ಲಾಭಗಳನ್ನು ಪಡೆಯಬಹುದು ಎಂಬುದು ನಮಗೀಗಾಗಲೇ ಗೊತ್ತು. ಆದರೆ ಹುರಿದ ಬೆಳ್ಳುಳ್ಳಿಯಿಂದ ಅನೇಕ ರೀತಿಯ ಆರೋಗ್ಯ ಲಾಭಗಳನ್ನು ಪಡೆಯಬಹುದು ಎಂಬುದು ಸಂಶೋಧನೆಯಿಂದ ಸಾಬೀತಾಗಿದೆ.
ನಿರಂತರವಾಗಿ ಒಂದು ತಿಂಗಳು ದಿನಕ್ಕೆ ಆರರಂತೆ ಹುರಿದ ಬೆಳ್ಳುಳ್ಳಿ ಸೇವಿಸಬೇಕು. ಇದರಲ್ಲಿ ಹೇರಳವಾಗಿ ಆಲ್ಲಿಸಿನ್ ಇರುವುದರಿಂದ ಮಾನವ ಶರೀರಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
ಹುರಿದ ಬೆಳ್ಳುಳ್ಳಿಗೆ ಶರೀರದಲ್ಲಿ ಕೊಬ್ಬಿನ ಪ್ರಮಾಣವನ್ನು ತಗ್ಗಿಸುವ ಶಕ್ತಿ ಇದೆ. ಆದ್ದರಿಂದ 6 ಹುರಿದ ಬೆಳ್ಳುಳ್ಳಿ ತುಂಡುಗಳನ್ನು ಸೇವಿಸಿ. ಶರೀರದ ಕೊಬ್ಬಿನಾಂಶ ಸಾಧಾರಣ ಸ್ಥಿತಿಗೆ ತಲುಪುತ್ತದೆ. ಇದರಿಂದ ಒಬೆಸಿಟಿ, ಹೃದಯ ಸಂಬಂಧಿತ ರೋಗಗಳು ಮತ್ತು ಹೆಚ್ಚಿನ ಒತ್ತಡವನ್ನು ಕೂಡ ನಿಯಂತ್ರಣದಲ್ಲಿ ಇಡಬಹುದು.
ಬೆಳ್ಳುಳ್ಳಿಯಲ್ಲಿ ಆಂಟಿಆಕ್ಸಿಡೆಂಟ್ ಗಳು, ಪೊಟ್ಯಾಸಿಯಮ್, ವಿಟಮಿನ್ ಸಿ ಹಾಗೇನೇ ವಿಟಮಿನ್ ಬಿ6, ಕ್ಯಾಲ್ಸಿಯಂ ಮತ್ತು ಕಡಿಮೆ ಪ್ರಮಾಣದ ಕಬ್ಬಿಣಾಂಶ ಕೂಡ ಇರುತ್ತದೆ.