ಜೀವನದಲ್ಲಿ ಮೂಲಭೂತ ಸೌಲಭ್ಯ, ಸೌಕರ್ಯ ಪಡೆಯಲು ಅಗತ್ಯವಾಗಿ ಹಣ ಬೇಕು. ಕೈತುಂಬ ಹಣವಿಲ್ಲದೆ ಹೋದ್ರೂ ಸರಳ ಜೀವನ ನಡೆಸುವಷ್ಟಾದ್ರೂ ಹಣ ಸಂಪಾದಿಸಲು ಜನರು ಬಯಸ್ತಾರೆ.
ಹಣ ಸಂಪಾದನೆ ಬಗ್ಗೆ ಶಾಸ್ತ್ರಗಳಲ್ಲೂ ವಿವರವಾಗಿ ಹೇಳಲಾಗಿದೆ. ಕೆಲವೊಂದು ನಿಯಮಗಳನ್ನು ಪಾಲನೆ ಮಾಡುವ ಮೂಲಕ ಹಣ ಸಂಪಾದನೆ ಮಾಡಬಹುದು.
ಗುರುವಾರ ತುಳಸಿ ಗಿಡಕ್ಕೆ ಹಸಿ ಹಾಲನ್ನು ಅರ್ಪಿಸಬೇಕು. ಇದ್ರಿಂದ ಆರ್ಥಿಕ ಅಭಿವೃದ್ಧಿ ಸಾಧ್ಯ. ಗುರು ಪುಷ್ಯ ನಕ್ಷತ್ರದಲ್ಲಿ ಈ ಕೆಲಸ ಶುರು ಮಾಡಿದ್ರೆ ಮತ್ತಷ್ಟು ಶುಭ ಫಲ ಪ್ರಾಪ್ತಿಯಾಗಲಿದೆ.
ಗುರುವಾರ ಸ್ನಾನ ಮಾಡುವ ವೇಳೆ ಸ್ನಾನದ ನೀರಿಗೆ ಚಿಟಕಿ ಅರಿಶಿನವನ್ನು ಹಾಕಿ, ಸಾಧ್ಯವಾದ್ರೆ ಬಾಳೆ ಗಿಡದ ಕೆಳಗೆ ನೀರನ್ನು ಹಾಕಿ. ಪೂಜೆ ಮಾಡಿ. ಈ ಉಪಾಯ ಆರ್ಥಿಕ ಸಂಕಷ್ಟದಿಂದ ಮುಕ್ತಿ ನೀಡುತ್ತದೆ.
ಗುರುವನ್ನು ಬಲವಾಗಿ ಹಾಗೂ ಮಂಗಳಕರವಾಗಿ ಮಾಡಲು ಬಯಸುತ್ತೀರೆಂದ್ರೆ ಗುರುವಾರದ ದಿನ ಬೆಳಿಗ್ಗೆ ಶಿವನಿಗೆ ಹಳದಿ ಹೂವನ್ನು ಅರ್ಪಿಸಿ. ಇದ್ರಿಂದ ಸಾಕಷ್ಟು ಲಾಭ ಪಡೆಯಬಹುದು.
ಗುರುವಾರ ವೃತ ಮಾಡಬೇಕು. ಇದ್ರಿಂದ ಆರ್ಥಿಕ ಸಮಸ್ಯೆ ದೂರವಾಗುವ ಜೊತೆಗೆ ಬೇಡಿದ ಎಲ್ಲ ಬಯಕೆ ಈಡೇರುತ್ತದೆ. ಮನೆಯಲ್ಲಿ ಶಾಂತಿ ನೆಲೆಸುತ್ತದೆ.