ಮನೆಯಲ್ಲಿ ಸುಲಭವಾಗಿ ಮಾಡಿ, ರುಚಿ ಸವಿಯಲು ನೇಪಾಲಿ ಕ್ರಿಸ್ಟ್ ಮಟನ್ ಮಾಡುವ ಮಾಹಿತಿ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು:
1 ಕೆ.ಜಿ. ಮಾಂಸ, 1 ಕಪ್ ಎಣ್ಣೆ, ರುಬ್ಬಿಕೊಳ್ಳಲು 1 ಚೂರು ಶುಂಠಿ, 1 ಟೇಬಲ್ ಸ್ಪೂನ್ ಗಸಗಸೆ, 6 ಕೆಂಪು ಮೆಣಸಿನ ಕಾಯಿ.
ತಯಾರಿಸುವ ವಿಧಾನ:
ಮೊದಲಿಗೆ ಮಾಂಸವನ್ನು ಬೇಯಿಸಿಕೊಂಡು ತೆಳ್ಳಗೆ ಕತ್ತರಿಸಿಕೊಳ್ಳಿ. ಎಣ್ಣೆಯನ್ನು ಕಾಯಿಸಿ ಅದರಲ್ಲಿ ಮಾಂಸವನ್ನು ಹುರಿದುಕೊಳ್ಳಿ. ಹುರಿದುಕೊಂಡ ಬಳಿಕ ತೆಗೆದು ಪಕ್ಕದಲ್ಲಿಡಿ.
ಅದೇ ಎಣ್ಣೆಯಲ್ಲಿ ರುಬ್ಬಿಕೊಂಡ ಮಸಾಲೆ ಮತ್ತು ಉಪ್ಪನ್ನು ಹಾಕಿರಿ. ಸ್ವಲ್ಪ ಹೊತ್ತು ಹುರಿದುಕೊಳ್ಳಿ. ಅದಕ್ಕೆ ಮೊದಲೇ ಹುರಿದುಕೊಂಡ ಮಾಂಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನೇಪಾಲಿ ಕ್ರಿಸ್ಟ್ ಮಟನ್ ರೆಡಿಯಾಗುತ್ತದೆ. ಅದನ್ನು ಚಪಾತಿ ಅಥವಾ ಪರೋಟದೊಂದಿಗೆ ಸೇವಿಸಬಹುದಾಗಿದೆ.