ವಿಶ್ವದ ಅತಿ ಶ್ರೀಮಂತ ಸಾಕುಪ್ರಾಣಿ ಹೊಂದಿದ್ದಾಳೆ ಈ ಪಾಪ್‌ ತಾರೆ; ಈ ಬೆಕ್ಕಿನ ಬೆಲೆ ಸಾವಿರಾರು BMW ಕಾರುಗಳಿಗಿಂತ್ಲೂ ಅಧಿಕ….!

ಬೆಕ್ಕು, ನಾಯಿ ಇವನ್ನೆಲ್ಲ ಸಾಕೋದು ಹೊಸ ಟ್ರೆಂಡ್‌ ಆಗಿ ಬದಲಾಗಿದೆ. ಪಾಪ್ ಲೋಕದ ತಾರೆ ಟೇಲರ್ ಸ್ವಿಫ್ಟ್ ಕೂಡ ಸಾಕುಪ್ರಾಣಿಯೊಂದನ್ನು ಹೊಂದಿದ್ದಾರೆ. ಇದೊಂದು ಶ್ರೀಮಂತ ಬೆಕ್ಕು. ಇದರ ಮೌಲ್ಯ ಕೇಳಿದ್ರೆ ಎಂಥವರು ಕೂಡ ದಂಗಾಗಿ ಹೋಗ್ತಾರೆ. ಟೇಲರ್ ಸ್ವಿಫ್ಟ್ ಒಡೆತನದ ಈ ಬೆಕ್ಕಿನ ಬೆಲೆ 800 ಕೋಟಿ, ಅಂದ್ರೆ 97 ಮಿಲಿಯನ್ ಡಾಲರ್. ಇದು ವಿಶ್ವದ ಮೂರನೇ ಅತ್ಯಂತ ದುಬಾರಿ ಸಾಕುಪ್ರಾಣಿಯಾಗಿದೆ.

ಬೆಕ್ಕಿನ ಹೆಸರೇನು? ಈ ಸಿರಿವಂತ ಬೆಕ್ಕಿನ ಹೆಸರು ಒಲಿವಿಯಾ ಬೆನ್ಸನ್. ಮಾಹಿತಿಯ ಪ್ರಕಾರ ಇನ್‌ಸ್ಟಾದಲ್ಲಿ Nala.Cat ಹೆಸರಲ್ಲಿ ಖಾತೆಯನ್ನೂ ಇದು ಹೊಂದಿದೆಯಂತೆ. Instagram ನಲ್ಲಿ ಈ ಅಪರೂಪದ ಬೆಕ್ಕು ಎರಡನೇ ಸ್ಥಾನದಲ್ಲಿದೆ. 4.4 ಮಿಲಿಯನ್ ಫಾಲೋವರ್‌ಗಳನ್ನು ಇದು ಹೊಂದಿದೆ. ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ ಬೆಕ್ಕು ಎಂಬ ಗಿನ್ನಿಸ್ ದಾಖಲೆ ಕೂಡ ಬೆಕ್ಕಿನ ಹೆಸರಲ್ಲಿದೆ. ಒಲಿವಿಯಾ ಬೆನ್ಸನ್‌ಗೆ ಪ್ರಪಂಚದಾದ್ಯಂತ ಅಭಿಮಾನಿಗಳಿದ್ದಾರೆ.

ಹಲವು ವಿಡಿಯೋಗಳಲ್ಲಿ ಈ ಬೆಕ್ಕು ಕಾಣಿಸಿಕೊಂಡಿದೆ. ಜಾಹೀರಾತಿನಲ್ಲಿ ಕೂಡ ಮಿಂಚಿರೋದು ವಿಶೇಷ. ಟೇಲರ್ ಸ್ವಿಫ್ಟ್ 2014 ರಲ್ಲಿ ಈ ಸುಂದರವಾದ ಬೆಕ್ಕನ್ನು ದತ್ತು ಪಡೆದರು. ಟೇಲರ್ ಸ್ವಿಫ್ಟ್ ವಿಶ್ವದ ಅತಿ ಹೆಚ್ಚು ಹಣ ಗಳಿಸುವ ಗಾಯಕಿ. ಪ್ರತಿ ವರ್ಷ ಸುಮಾರು 150 ಮಿಲಿಯನ್ ಡಾಲರ್‌ ಸಂಪಾದಿಸುತ್ತಾರೆ. ಆದರೆ ಬೆಕ್ಕಿಗೆ ಇಷ್ಟೊಂದು ಬೆಲೆ ಯಾಕೆ ಅನ್ನೋದು ಎಲ್ಲರನ್ನೂ ಕಾಡುವ ಕುತೂಹಲ. 2020 ರಲ್ಲಿ ಸ್ವಿಫ್ಟ್ ಹಂಚಿಕೊಂಡ ಫೋಟೋದಲ್ಲಿ ಈ ಶ್ರೀಮಂತ ಬೆಕ್ಕು ಕಾಣಿಸಿಕೊಂಡಿತ್ತು. ಆ ಫೋಟೋಗೆ ಲಕ್ಷಗಟ್ಟಲೆ ಲೈಕ್ಸ್‌ ಸಹ ಬಂದಿದೆ.

 

 

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read