alex Certify ರೈಲಿನಲ್ಲಿ ಕಳೆದುಕೊಂಡ ಪರ್ಸ್ ಮರಳಿ ಪಡೆದ ವಿದೇಶಿ ಮಹಿಳೆ; ಭಾರತೀಯರ ಪ್ರಾಮಾಣಿಕತೆಗೆ ಶ್ಲಾಘನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲಿನಲ್ಲಿ ಕಳೆದುಕೊಂಡ ಪರ್ಸ್ ಮರಳಿ ಪಡೆದ ವಿದೇಶಿ ಮಹಿಳೆ; ಭಾರತೀಯರ ಪ್ರಾಮಾಣಿಕತೆಗೆ ಶ್ಲಾಘನೆ

ಭಾರತದ ರೈಲಿನಲ್ಲಿ ತನ್ನ ಕೈಚೀಲವನ್ನು ಮರೆತುಹೋದ ಅಮೆರಿಕ ಮಹಿಳೆಯೊಬ್ಬರು, ಕಳೆದುಹೋದ ವಸ್ತುವನ್ನು ಮರಳಿ ಪಡೆದಿದ್ದಾರೆ.

ಈ ಘಟನೆಯ ನಂತರ ಪರ್ಸ್​ ವಾಪಸ್​ ಪಡೆಯಲು ವ್ಯಕ್ತಿಯೊಬ್ಬರು ಹೇಗೆ ಸಹಾಯ ಮಾಡಲು ಮುಂದೆ ಬಂದರು ಎಂಬುದನ್ನು ಅವರು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. ಅದೀಗ ವೈರಲ್​ ಆಗಿದೆ.

@stephandpete_ ಎಂಬ ಬಳಕೆದಾರರು ಇನ್​ಸ್ಟಾಗ್ರಾಮ್​ ಪೋಸ್ಟ್​ನಲ್ಲಿ ಈ ಬಗ್ಗೆ ತಿಳಿಸಿದ್ದಾರೆ. ಭಾರತದಲ್ಲಿ ರೈಲು ಹತ್ತಿದಾಗ, ತನ್ನ ವ್ಯಾಲೆಟ್ ಅನ್ನು ಮರೆತು ನಿಲ್ದಾಣದಲ್ಲಿ ಇಳಿದಿದ್ದೆ. ಶೀಘ್ರದಲ್ಲೇ, ಚಿರಾಗ್ ಎಂಬ ವ್ಯಕ್ತಿ ನನ್ನ ಇನ್​ಸ್ಟಾಗ್ರಾಮ್​ಗೆ ಸಂದೇಶ ಕಳುಹಿಸಿದ್ದರು. ನಂತರ ಅವರು ಹೇಳಿದ್ದಲ್ಲಿಗೆ ಹೋದೆ. ನನ್ನ ಪರ್ಸ್ ವಾಪಸ್​ ಸಿಕ್ಕಿತು ಎಂದು ಹೇಳಿಕೊಂಡಿದ್ದಾರೆ.

ಮಹಿಳೆ ಗುಜರಾತ್‌ನ ಭುಜ್‌ನಲ್ಲಿರುವ ಚಿರಾಗ್ಸ್ ರೆಸ್ಟೋರೆಂಟ್‌ಗೆ ತೆರಳಿ ಪರ್ಸ್​ ಪಡೆದುಕೊಂಡಿದ್ದಾರೆ. ಭಾರತದ ಬಗ್ಗೆ ಕೊಂಡಾಡಿದ್ದಾರೆ. ಚಿರಾಗ್​ ಅವರಿಗೆ ಧನ್ಯವಾದ ತಿಳಿಸಿದ್ದಾರೆ ಮತ್ತು ಈ ರೀತಿಯ ವ್ಯಕ್ತಿಗಳೂ ಇರುತ್ತಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ತಾನು ಸ್ವಲ್ಪ ಹಣವನ್ನು ಕೊಡಲು ಮುಂದಾದರೂ ಅವರು ಅದನ್ನು ಸ್ವೀಕರಿಸಲಿಲ್ಲ ಎಂದಿದ್ದಾರೆ.

https://youtu.be/Tbvz4o54qXo

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...