ರೇಣುಕಾಚಾರ್ಯ ಕಾರು ಏರಿದ ಕೋತಿ; ಚುನಾವಣೆಗೂ ಮುನ್ನವೇ ‘ಭಜರಂಗಿ’ ಆಶೀರ್ವಾದ ಎಂದು ಸಂತಸಗೊಂಡ ಅಭಿಮಾನಿಗಳು

ದಾವಣಗೆರೆ ಜಿಲ್ಲೆ ಹೊನ್ನಾಳಿ ಕ್ಷೇತ್ರದ ಶಾಸಕ ರೇಣುಕಾಚಾರ್ಯ ಅವರ ಕಾರಿನ ಮೇಲೆ ಕೋತಿಯೊಂದು ಏರಿದ್ದು, ಈ ಸಂದರ್ಭದಲ್ಲಿ ಅದು ಶಾಸಕರು ನೀಡಿದ ಸೇಬುಹಣ್ಣನ್ನು ಸವಿದಿದೆ. ಇಂತಹದೊಂದು ಘಟನೆ ಮಹಾಶಿವರಾತ್ರಿಯ ದಿನವಾದ ಶನಿವಾರ ನಡೆದಿದೆ.

ರೇಣುಕಾಚಾರ್ಯ ಅವರು ತಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಜೊತೆ ಸವಳಂಗದಲ್ಲಿದ್ದ ವೇಳೆ ಕೋತಿ ಅವರ ಕಾರಿನ ಮೇಲೆ ಕೂತಿದೆ. ಆಗ ರೇಣುಕಾಚಾರ್ಯ ಅದರ ತಲೆ ಸವರುತ್ತಾ ಸೇಬುಹಣ್ಣನ್ನು ನೀಡಿದ್ದಾರೆ. ಇದನ್ನು ಪಡೆದ ಕೋತಿ ಪಕ್ಕದ ಬೈಕಿನ ಮೇಲೆ ಹಾರಿ ಅಲ್ಲಿ ಹಣ್ಣನ್ನು ಸವಿದಿದೆ.

ಈ ದೃಶ್ಯವನ್ನು ನೋಡಿದ ರೇಣುಕಾಚಾರ್ಯ ಅವರ ಅಭಿಮಾನಿಗಳು ವಿಧಾನಸಭಾ ಚುನಾವಣೆಗೂ ಮುನ್ನವೇ ತಮ್ಮ ನಾಯಕನಿಗೆ ಭಜರಂಗಿ ಆಶೀರ್ವಾದ ಸಿಕ್ಕಿದೆ ಎಂದು ಸಂತಸಗೊಂಡಿದ್ದಾರೆ. ಅದರಲ್ಲೂ ಶಿವರಾತ್ರಿ ಹಬ್ಬದ ದಿನದಂದು ನಡೆದಿರುವ ಈ ಘಟನೆ ಅವರ ಸಂತಸವನ್ನು ಇಮ್ಮಡಿಗೊಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read