ಮನೆಗೆ ದಿಡೀರ್ ಅತಿಥಿಗಳ ಆಗಮನವಾದರೆ ಮೊದಲು ತಯಾರಾಗುವ ಸಿಹಿ ಎಂದರೆ ಅದು ಪಾಯಸ. ಹೆಚ್ಚಾಗಿ ಶಾವಿಗೆ ಪಾಯಸ, ಹೆಸರುಬೇಳೆ ಪಾಯಸ ಮಾಡುವುದು ಮಾಮೂಲಿ.
ವಿಶೇಷವಾಗಿ ಪಾಯಸ ತಯಾರಿಸಬೇಕೆಂಬ ಮನಸ್ಸಿದ್ದರೆ ತೆಂಗಿನ ಹಾಲಿನ ಪಾಯಸ ತಯಾರಿಸಿ. ಇಲ್ಲಿದೆ ಅದರ ರೆಸಿಪಿ.
ಬೇಕಾಗುವ ಸಾಮಾಗ್ರಿಗಳು
ತೆಂಗಿನಕಾಯಿ – 2
ಬೆಲ್ಲ – 200 ಗ್ರಾಂ
ಅಕ್ಕಿ – 1 ಸಣ್ಣ ಬಟ್ಟಲು
ಹಾಲು – 1 ಲೀಟರ್
ತುಪ್ಪ – 1 ಬಟ್ಟಲು
ದ್ರಾಕ್ಷಿ – 2 ಚಮಚ
ಗೋಡಂಬಿ – 2 ಚಮಚ
ಏಲಕ್ಕಿ ಸ್ವಲ್ಪ
ಪಚ್ಚ ಕರ್ಪೂರ – 1
ಮಾಡುವ ವಿಧಾನ
ತೆಂಗಿನಕಾಯಿ ತುರಿದು ಅದರ ಹಾಲನ್ನು ತಯಾರಿಸಿ, ನೀರು ಬೆರೆಸಿ ಎಳೆ ಹಾಲನ್ನು ತಯಾರಿಸಿಟ್ಟುಕೊಳ್ಳಬೇಕು. ನಂತರ ತೆಂಗಿನ ಹಾಲಿನಲ್ಲಿ ಹಾಕಿ ಬೇಯಿಸಿ ಕೊಳ್ಳಬೇಕು. ಮುಕ್ಕಾಲುಭಾಗ ಬೆಂದ ಬಳಿಕ ಗಟ್ಟಿ ಹಾಲು ಸೇರಿಸಿ ಹಾಲು ಪೂರ್ತಿ ಆವಿ ಆಗುವವರೆಗೂ ಬೇಯಿಸಿಕೊಳ್ಳಬೇಕು. ಮತ್ತಷ್ಟು ಹಾಲು ಸೇರಿಸಿ ಪುನಃ ಬೇಯಿಸಿಕೊಳ್ಳಬೇಕು.
ಹಾಲು ಸಂಪೂರ್ಣವಾಗಿ ಹೀರಲ್ಪಟ್ಟ ನಂತರ ಜಜ್ಜಿದ ಬೆಲ್ಲ ಸೇರಿಸಿ ಮಿಶ್ರಣ ಚೆನ್ನಾಗಿ ಬೆರೆತುಕೊಳ್ಳುವವರೆಗೂ ಬೇಯಿಸಿಕೊಳ್ಳಬೇಕು. ನಂತರ ತುಪ್ಪದಲ್ಲಿ ಹುರಿದುಕೊಂಡ ದ್ರಾಕ್ಷಿ, ಗೋಡಂಬಿ ಮತ್ತು ಏಲಕ್ಕಿ ಪುಡಿ, ಪಚ್ಚಕರ್ಪೂರ ಸೇರಿಸಿ ಬಿಸಿಬಿಸಿಯಾದ ರುಚಿ ರುಚಿಯಾದ ತೆಂಗಿನ ಹಾಲಿನ ಪಾಯಸ ಸವಿಯಲು ನೀಡಿ.