ಬೇಕಾಗುವ ಸಾಮಾಗ್ರಿಗಳು:
ಗೋಧಿ – 1 ಕಪ್, ಬೆಲ್ಲ – 1 ½ ಕಪ್, ಕಾಯಿತುರಿ – 4 ಕಪ್, ಏಲಕ್ಕಿ- ಚಿಟಿಕೆ, ತುಪ್ಪ – ಸ್ವಲ್ಪ, ದ್ರಾಕ್ಷಿ, ಗೋಡಂಬಿ, ಸ್ವಲ್ಪ ಉಪ್ಪು
ಮಾಡುವ ವಿಧಾನ:
ಗೋಧಿಯನ್ನು ಸ್ವಲ್ಪ ಹೊತ್ತು ನೆನೆಸಿ ಅದನ್ನು ಕುಟ್ಟಿ, ಅದರ ಹೊಟ್ಟು ತೆಗೆಯಬೇಕು. ಬಳಿಕ ಇದನ್ನು ಕುಕ್ಕರ್ ಗೆ ಹಾಕಿ ಸ್ವಲ್ಪ ನೀರು ಹಾಕಿ 7-8 ವಿಸಿಲ್ ನಷ್ಟು ಬೇಯಿಸಿ. ನಂತರ ತುರಿದ ತೆಂಗಿನಕಾಯಿಯಿಂದ ಹಾಲು ತೆಗೆದಿಟ್ಟುಕೊಳ್ಳಿ. ಚೆನ್ನಾಗಿ ಬೆಂದ ಗೋಧಿಗೆ ಕಾಯಿಹಾಲು ಸೇರಿಸಿ ಮಿಕ್ಸ್ ಮಾಡಿಕೊಂಡು ಕುದಿಸಿ.
ನಂತರ ಬೆಲ್ಲ ಹಾಕಿ ಚೆನ್ನಾಗಿ ಕುದಿಸಿ. ಚೆನ್ನಾಗಿ ಕುದಿದ ನಂತರ ಚಿಟಿಕೆ ಉಪ್ಪು ಹಾಕಿ ಮಿಕ್ಸ್ ಮಾಡಿ. ಬಳಿಕ ಚಿಟಿಕೆ ಏಲಕ್ಕಿ ಹಾಕಿ, ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿಯನ್ನು ಮಿಕ್ಸ್ ಮಾಡಿದರೆ ಸವಿಯಲು ರುಚಿಯಾದ ಗೋಧಿ ಪಾಯಸ ರೆಡಿ.