ಮಾರುತಿ ಸ್ವಿಫ್ಟ್ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಪ್ರಾಬಲ್ಯವನ್ನು ಮುಂದುವರೆಸಿದೆ. 2023ರ ಆಗಸ್ಟ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಎನಿಸಿಕೊಂಡಿದೆ. ಕಳೆದ ತಿಂಗಳು ಮಾರುತಿ ಸ್ವಿಫ್ಟ್ ಕಾರಿನ 18,653 ಯುನಿಟ್‌ಗಳು ಮಾರಾಟವಾಗಿವೆ.
ಈ ಮೂಲಕ ಸ್ವಿಫ್ಟ್, ಮಾರುತಿ ಬಲೆನೊವನ್ನು ಹಿಂದಿಕ್ಕಿದೆ. ಆಗಸ್ಟ್‌ನಲ್ಲಿ 18,516 ಬಲೆನೊ ಕಾರುಗಳು ಬಿಕರಿಯಾಗಿವೆ. ಇದು ಆಗಸ್ಟ್‌ನಲ್ಲಿ ಎರಡನೇ ಅತಿ ಹೆಚ್ಚು ಮಾರಾಟವಾದ ಕಾರು. ಆಗಸ್ಟ್ 2022 ರಲ್ಲಿ ಕೇವಲ 11,275 ಯುನಿಟ್‌ಗಳು ಮಾರಾಟವಾಗಿದ್ದವು. ಅದಕ್ಕೆ ಹೋಲಿಸಿದ್ರೆ ಮಾರುತಿ ಸ್ವಿಫ್ಟ್ ಕಾರಿನ ಸೇಲ್ಸ್ 65 ಪ್ರತಿಶತದಷ್ಟು ಹೆಚ್ಚಾಗಿದೆ.
ಮಾರುತಿ ಸ್ವಿಫ್ಟ್ ಜನಪ್ರಿಯತೆಗೆ ಹಲವು ಕಾರಣಗಳಿವೆ. ಕಾರಿನ ಸೊಗಸಾದ ವಿನ್ಯಾಸ, ಕೈಗೆಟುಕುವ ಬೆಲೆ ಮತ್ತು ಅತ್ಯುತ್ತಮ ಮೈಲೇಜ್‌ಗೆ ಇದು ಹೆಸರುವಾಸಿಯಾಗಿದೆ. ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಕ್ರೂಸ್ ಕಂಟ್ರೋಲ್, 4.2 ಇಂಚಿನ ಕಲರ್ ಡ್ರೈವರ್ ಡಿಸ್‌ಪ್ಲೇ, 7.0 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೋ ಎಸಿ ಮತ್ತು ಹೈಟ್ ಅಡ್ಜಸ್ಟಬಲ್ ಡ್ರೈವರ್ ಸೀಟ್, ಎಲ್‌ಇಡಿ ಡಿಆರ್‌ಎಲ್‌ನೊಂದಿಗೆ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳಂತಹ ಅನೇಕ ಆಧುನಿಕ ಫೀಚರ್‌ಗಳು ಮಾರುತಿ ಸ್ವಿಫ್ಟ್‌ನಲ್ಲಿವೆ.
ಪ್ರಯಾಣಿಕರ ಸುರಕ್ಷತೆಗಾಗಿ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್ ಹೋಲ್ಡ್ ಕಂಟ್ರೋಲ್, ಡ್ಯುಯಲ್-ಫ್ರಂಟ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS ಮತ್ತು ಹಿಂಭಾಗದ ಪಾರ್ಕಿಂಗ್ ಸಂವೇದಕಗಳಂತಹ ಫೀಚರ್‌ಗಳನ್ನೂ ಅಳವಡಿಸಲಾಗಿದೆ. ಮಾರುತಿ ಸ್ವಿಫ್ಟ್ ಕಾರಿನ ಬೆಲೆ 5.99 ಲಕ್ಷದಿಂದ ಪ್ರಾರಂಭವಾಗಿ 9.03 ಲಕ್ಷ ರೂಪಾಯಿವರೆಗಿದೆ. ಇದು ಕೇವಲ ಒಂದು ಎಂಜಿನ್ ಆಯ್ಕೆಯೊಂದಿಗೆ ಬರುತ್ತದೆ.
ಇದು 1.2L ಡ್ಯುಯಲ್‌ಜೆಟ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. 90 PS ಮತ್ತು 113 Nm ಅನ್ನು ಉತ್ಪಾದಿಸುತ್ತದೆ. ಎಂಜಿನ್‌ನೊಂದಿಗೆ ಐಡಲ್ ಸ್ಟಾರ್ಟ್-ಸ್ಟಾಪ್ ಫೀಚರ್ ಸಹ ಇದೆ. 5-ಸ್ಪೀಡ್ ಮ್ಯಾನುವಲ್ ಮತ್ತು AMT ಗೇರ್‌ಬಾಕ್ಸ್ ಆಯ್ಕೆಗಳನ್ನು ಹೊಂದಿದೆ. CNG ಆಯ್ಕೆಯೂ ಲಭ್ಯವಿದೆ.