ಮನೆಯನ್ನ ವಾಸ್ತು ಪ್ರಕಾರವಾಗಿ ಕಟ್ಟೋದು ಎಷ್ಟು ಮುಖ್ಯಾನೋ ಕಟ್ಟಿದ ಬಳಿಕ ಆ ಮನೆಯನ್ನ ಶುಚಿಯಾಗಿ ಇಟ್ಟುಕೊಳ್ಳೋದು ಸಹ ಅಷ್ಟೇ ಮುಖ್ಯ ಎನ್ನುತ್ತೆ ವಾಸ್ತುಶಾಸ್ತ್ರ.
ಮನೆ ಸ್ವಚ್ಛವಾಗಿಲ್ಲ ಅಂದ ಕೂಡಲೇ ಜೇಡಗಳು ಮನೆಯಲ್ಲಿ ಆಶ್ರಯ ಪಡೆಯೋಕೆ ಆರಂಭಿಸಿಬಿಡುತ್ತವೆ. ಆದರೆ ಜೇಡರ ಹುಳುಗಳು ಮನೆಗಳಲ್ಲಿ ವಾಸ ಹೂಡಿದ್ರೆ ಅದನ್ನ ದಾರಿದ್ರ್ಯದ ಸಂಕೇತ ಎಂದು ಹೇಳಲಾಗುತ್ತೆ. ಹೀಗಾಗಿ ಮನೆಗಳಲ್ಲಿ ಜೇಡ ಕಾಣಿಸಿಕೊಳ್ತು ಅಂದ್ರೆ ಈ ಕ್ರಮಗಳನ್ನ ಅನುಸರಿಸಿ.
ಪುದೀನಾ & ಕಾಳುಮೆಣಸಿನ ಎಣ್ಣೆ : ಮೊದಲನೇದಾಗಿ ನಿಮ್ಮ ಮನೆಯ ಎಲ್ಲಾ ಮೂಲೆ ಮೂಲೆಗಳಲ್ಲಿ ಪುದೀನಾ ಹಾಗೂ ಕಾಳು ಮೆಣಸಿನ ಎಣ್ಣೆಯನ್ನ ಸಿಂಪಡಿಸಿ. ಯಾಕೆಂದರೆ ಜೇಡರ ಹುಳುಗಳಿಗೆ ಇವೆರಡ ವಾಸನೆಯನ್ನ ತಡೆದುಕೊಳ್ಳುವ ಶಕ್ತಿ ಇರೋದಿಲ್ಲ. ಹೀಗಾಗಿ ಎಣ್ಣೆ ಸಿಂಪಡನೆಯಾಗುತ್ತಿದ್ದಂತೆಯೇ ಅವು ನಿಮ್ಮ ಮನೆಯಿಂದ ಜಾಗ ಖಾಲಿ ಮಾಡುತ್ತವೆ.
ವಾರಕ್ಕೊಮ್ಮೆಯಾದರೂ ಮನೆಯಲ್ಲಿ ಧೂಳು ಸ್ವಚ್ಛ ಮಾಡುವ ಕೆಲಸ ಮಾಡಿ. ಧೂಳು ಎಲ್ಲಿ ಇರುತ್ತದೋ ಅಲ್ಲಿ ಜೇಡ ಇರುತ್ತವೆ. ಹೀಗಾಗಿ ನೀವು ವಾರ ವಾರ ಮನೆಯ ಮೂಲೆ ಮೂಲೆಗಳನ್ನ ಶುದ್ಧ ಮಾಡಿಬಿಟ್ರೆ ನಿಮ್ಮ ಮನೆಯಲ್ಲಿ ಜೇಡರ ಕಾಟ ಅನ್ನೋದೇ ಇರೋದಿಲ್ಲ.
ಮನೆಯ ಒಳಗಿನ ಸ್ವಚ್ಛತೆ ಎಷ್ಟು ಮುಖ್ಯಾನೋ ಅದೇ ರೀತಿ ಮನೆಯ ಹೊರಗಡೆ ಕೂಡ ಶುದ್ಧವಾಗಿ ಇಡೋದು ಅಷ್ಟೇ ಮುಖ್ಯ, ಜೇಡಗಳು ನಿಮ್ಮ ಮನೆಯ ಬಾಲ್ಕನಿಗಳಲ್ಲಿ ಇಲ್ಲವೇ ಮನೆಯ ಆವರಣದಲ್ಲೇ ಬಲೆ ಕಟ್ಟಿಬಿಡಬಹುದು. ಹೀಗಾಗಿ ಕಾಲಕಾಲಕ್ಕೆ ಮನೆಯ ಹೊರಗಡೆಯ ಸ್ವಚ್ಛತೆಯತ್ತಲೂ ಗಮನ ನೀಡಿ.