ಬಿಸಿಲು ಹೆಚ್ಚಾಗುತ್ತಿದೆ. ಏನಾದರೂ ತಂಪು ತಂಪು ಜ್ಯೂಸ್ ಕುಡಿಯಬೇಕು ಅನಿಸುವುದು ಸಹಜ. ಇನ್ನೇನು ಮಾವಿನಹಣ್ಣುಗಳ ಕಾಲ ಮುಗಿಯುತ್ತಿದೆ. ರುಚಿಕರವಾದ ಮಾವಿನಹಣ್ಣಿನ ಲಸ್ಸಿಮಾಡಿಕೊಂಡು ಕುಡಿಯುವುದರಿಂದ ದೇಹಕ್ಕೂ ಹಿತಕರವಾಗಿರುತ್ತದೆ. ಮಾಡುವ ವಿಧಾನ ಇಲ್ಲಿದೆ ನೋಡಿ.
ಮಾಡುವ ವಿಧಾನ: 4 ಮಧ್ಯಮ ಗಾತ್ರದ ಮಾವಿನ ಹಣ್ಣುಗಳನ್ನು ತೆಗೆದುಕೊಂಡು ಅದರ ಸಿಪ್ಪೆ ತೆಗೆದು ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ. ಕತ್ತರಿಸಿಕೊಂಡ ಮಾವಿನಹಣ್ಣನ್ನು ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು ಅದಕ್ಕೆ 4 ಚಮಚ ಸಕ್ಕರೆ ಅಥವಾ ಜೇನುತುಪ್ಪ ಸೇರಿಸಿಕೊಳ್ಳಿ. ಚಿಟಿಕೆ ಏಲಕ್ಕಿ ಪುಡಿ ಸೇರಿಸಿ ರುಬ್ಬಿಕೊಳ್ಳಿ.
ನಂತರ ಇದಕ್ಕೆ ಎರಡು ಕಪ್ ಮೊಸರು ಸೇರಿಸಿ 3 ಟೇಬಲ್ ಸ್ಪೂನ್ ನಷ್ಟು ಕೆನೆ, ಸ್ವಲ್ಪ ಹಾಲು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಮೊಸರು ಮಾವಿನ ಹಣ್ಣಿನ ತಿರುಳು ಚೆನ್ನಾಗಿ ಹೊಂದಿಕೊಳ್ಳುವವರೆಗೆ ರುಬ್ಬಿಕೊಂಡು ಗ್ಲಾಸ್ ಗೆ ಹಾಕಿಕೊಳ್ಳಿ. ರುಬ್ಬುವಾಗ ಬೇಕಿದ್ದರೆ ಐಸ್ ಕ್ಯೂಬ್ ಕೂಡ ಸೇರಿಸಿಕೊಳ್ಳಿ. ಇದನ್ನು ಒಂದು ಗ್ಲಾಸ್ ಹಾಕಿ ಸರ್ವ್ ಮಾಡಿ.