
ಬೀದರ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಈ ವಿಷಯ ತಿಳಿಸಿದ್ದು, ಮಾರ್ಚ್ ತಿಂಗಳಿನಲ್ಲಿಯೇ ಹೊಸ ರೈಲೊಂದು ಬೀದರ್ – ಬೆಂಗಳೂರು ನಡುವೆ ಸಂಚರಿಸಲಿದೆ ಎಂದು ಹೇಳಿದರು.
ಬೀದರಿಗೆ ಈಗಾಗಲೇ ಸೈನಿಕ ಶಾಲೆ ಸಿಕ್ಕಿದ್ದು, ಜೊತೆಗೆ ವಿಮಾನಯಾನ ಸಹ ಆರಂಭವಾಗಿದೆ. ಮುಕ್ತ ವಿಶ್ವವಿದ್ಯಾಲಯ ಹಾಗೂ ನೂತನ ವಿಶ್ವವಿದ್ಯಾಲಯ ಆರಂಭಕ್ಕೆ ಒತ್ತು ನೀಡಲಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.

