500 ಗ್ರಾಂ-ಬೆಂಡೆಕಾಯಿ, ½ ಕಪ್-ಎಣ್ಣೆ, ½ ಟೀ ಸ್ಪೂನ್-ಇಂಗು, ಚಿಟಿಕೆ-ಅರಿಶಿನ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಕತ್ತರಿಸಿದ್ದು. ½ ಕಪ್- ಕಡಲೆಹಿಟ್ಟು, 2 ಟೇಬಲ್ ಸ್ಪೂನ್- ಬಿಳಿ ಎಳ್ಳು, 2 ಟೀ ಸ್ಪೂನ್-ಖಾರದಪುಡಿ, 1 ಟೀ ಸ್ಪೂನ್-ಅರಿಶಿನ, 2 ಟೀ ಸ್ಪೂನ್-ಕೊತ್ತಂಬರಿ ಪುಡಿ, ½ ಟೀ ಸ್ಪೂನ್-ಜೀರಿಗೆ ಪುಡಿ, ಉಪ್ಪು-ರುಚಿಗೆ ತಕ್ಕಷ್ಟು.
ಮಾಡುವ ವಿಧಾನ:
ಮೊದಲಿಗೆ ಒಂದು ಬಾಣಲೆಯನ್ನು ಗ್ಯಾಸ್ ಮೇಲೆ ಇಡಿ. ನಂತರ ಅದಕ್ಕೆ ಕಡಲೆ ಹಿಟ್ಟು, ಬಿಳಿ ಎಳ್ಳು ಹಾಕಿ 2 ನಿಮಿಷಗಳ ಕಾಲ ಹುರಿಯಿರಿ. ಕಡಲೆಹಿಟ್ಟು ತುಸು ಪರಿಮಳ ಬರಲಿ. ನಂತರ ಇದಕ್ಕೆ ಅರಿಶಿನ, ಖಾರದಪುಡಿ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣ ತಣ್ಣಗಾಗುವುದಕ್ಕೆ ಬಿಡಿ.
ಬೆಂಡೆಕಾಯಿಯನ್ನು ಉದ್ದಕ್ಕೆ ಎರಡು ಭಾಗವಾಗಿ ಸೀಳಿಕೊಳ್ಳಿ. ನಂತರ ಪ್ಯಾನ್ ಗೆ ಎಣ್ಣೆ ಹಾಕಿ ಬೆಂಡೆಕಾಯಿ ಹಾಕಿ ಸ್ವಲ್ಪ ಅರಿಶಿನ ಹಾಕಿ ಹುರಿದಕೊಳ್ಳಿ. ನಂತರ ಚಿಟಿಕೆ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಹುರಿದಿಟ್ಟುಕೊಂಡ ಮಸಾಲಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬೆಂಡೆಕಾಯಿ ಬೇಯುವವರೆಗೆ ಕೈಯಾಡಿಸಿ.