ನಿಮ್ಮ ಮಗುವಿಗೆ ಬಾಟಲ್ ಹಾಲು ಕುಡಿಸುತ್ತಿದ್ದೀರಾ, ಅದರ ಸ್ವಚ್ಛತೆಯೆಡೆಗೆ ನೀವು ಎಷ್ಟು ಗಮನ ಹರಿಸುತ್ತಿದ್ದೀರಿ…?
ಹೌದು, ಸಣ್ಣ ಮಗು ಬಾಟಲಿ ಹಾಲನ್ನು ಇಷ್ಟಪಟ್ಟು ಕುಡಿಯುತ್ತದೆ ಎಂಬುದೇನೋ ನಿಜ. ಆದರೆ ಅದನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಅಷ್ಟೇ ಮುಖ್ಯವಾಗುತ್ತದೆ. ಪ್ರತಿ ಬಾರಿ ಹಾಲು ಕುಡಿದ ತಕ್ಷಣ ಉಳಿದ ಹಾಲನ್ನು ಚೆಲ್ಲಿ ಬಾಟಲಿಯನ್ನು ತೊಳೆದಿಡಿ. ಬಳಿಕ ಅದರ ಮುಚ್ಚಳದಿಂದ ಪ್ರತ್ಯೇಕಿಸಿ.
ಇಲ್ಲವಾದಲ್ಲಿ ಅದರಿಂದ ಹೊರಬರುವ ದುರ್ವಾಸನೆಯ ಮಧ್ಯೆ ಮುಂದಿನ ಬಾರಿ ಕೊಡುವ ಹಾಲು ಹಾಳಾದೀತು, ಮಗು ಹಾಲು ಕುಡಿಯದೇ ಇದ್ದೀತು. ತೊಳೆಯದೇ ಹಾಗೆ ಇಡುವುದರಿಂದ ಹಾಲು ಹಾಳಾಗಿ ಮಗುವಿನ ಬಾಟಲ್ ಬ್ಯಾಕ್ಟೀರಿಯಾಗಳ ಗೂಡಾದೀತು. ಹಾಗಾಗಿ ಬಳಸಿದ ತಕ್ಷಣ ಮರೆಯದೆ ತೊಳೆದಿಡಿ.
ತೊಳೆಯುವಾಗಲೂ ಅಷ್ಟೇ ಕಡ್ಡಾಯವಾಗಿ ಬಿಸಿನೀರಿನಲ್ಲೇ ತೊಳೆಯಿರಿ. ಬ್ರಶ್ ಹಾಕಿ ಬಾಟಲ್ ತೊಳೆಯಿರಿ. ನಿಪ್ಪಲ್ ಗೂ ಬಿಸಿನೀರು ಹಾಕಿಯೇ ತೊಳೆಯಿರಿ. ದಿನಕ್ಕೊಮ್ಮೆ ಈ ಬಾಟಲ್ ನಲ್ಲಿ ಕುದಿಯುವ ನೀರಿನಲ್ಲಿ ಹಾಕಿ ಕುದಿಸಿ.
ಅಗತ್ಯವಿಲ್ಲದ ಸಮಯದಲ್ಲಿ ಇದನ್ನು ಖಾಲಿ ಬಿಡಿ, ಅಂದರೆ ಒಣಗಲು ಬಿಡಿ. ಬಾಟಲ್ ಆಯ್ಕೆ ಮಾಡುವಾಗಲೂ ಅಷ್ಟೇ ಉತ್ತಮ ದರ್ಜೆಯ ಬಾಟಲ್ ಅನ್ನೇ ಖರೀದಿಸಿ. ಎರಡು ಮೂರು ಬಾಟಲ್ ಇಟ್ಟುಕೊಂಡಿರಿ. ಒಂದು ತೊಳೆದು ಒಣಗಲು ಇಟ್ಟಾಗ ಇನ್ನೊಂದನ್ನು ಬಳಸಿ.