ಹಣ್ಣುಗಳ ರಾಜ ಮಾವಿನಲ್ಲಿ ಏನೇ ಮಾಡಿದರೂ ತುಂಬಾ ರುಚಿಯಾಗಿರುತ್ತದೆ. ಸಾಮಾನ್ಯವಾಗಿ ಊಟದ ನಂತರ ಮಾವು ತಿನ್ನುವುದು ರೂಢಿ. ಬರೀ ಮಾವಿನ ಹಣ್ಣು ತಿನ್ನುವ ಬದಲು ಈ ರೀತಿಯಾಗಿ ಬಳಸಿ ನೋಡಿ.
2-3 ಚೆನ್ನಾಗಿ ಹಣ್ಣಾದ ಬಾದಾಮಿ ಮಾವಿನ ಹಣ್ಣು
ಏಲಕ್ಕಿ ಪುಡಿ ಸ್ವಲ್ಪ
ಹಾಲು ಒಂದು ಲೋಟ
ಬೆಲ್ಲ ಅಥವಾ ಸಕ್ಕರೆ 4-5 ಚಮಚ.
ಸೀಕರಣೆ ಮಾಡಲು ಮೊದಲು ಹಣ್ಣನ್ನು ಚೆನ್ನಾಗಿ ತೊಳೆದು, ಸಿಪ್ಪೆ ತೆಗೆದು, ಪಲ್ಪ್ (ತಿರುಳು) ಬೇರ್ಪಡಿಸಿ. ಇದಕ್ಕೆ ಏಲಕ್ಕಿ, ಬೆಲ್ಲ ಅಥವಾ ಸಕ್ಕರೆ ಬೆರೆಸಿ ಮಿಕ್ಸಿಯಲ್ಲಿ ಒಮ್ಮೆ ವಿಪ್ ಮಾಡಿ. ನಂತರ ಹಾಲು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ ಸವಿಯಿರಿ.
ಇದನ್ನು ಫ್ರಿಡ್ಜ್ ನಲ್ಲಿ ಸ್ವಲ್ಪ ಹೊತ್ತು ಇಟ್ಟು ತಿಂದರೆ ರುಚಿ ಇನ್ನಷ್ಟು ಚೆನ್ನಾಗಿ ಇರುತ್ತದೆ.