2023ರ ಹೊಸ ವರ್ಷವು ಅದ್ದೂರಿಯಾಗಿ ಪ್ರಾರಂಭವಾಗಿದೆ. ನ್ಯೂ ಇಯರ್ ಸೆಲೆಬ್ರೇಷನ್ ಬಳಿಕ ವರ್ಷದ ಮೊದಲ ಹಬ್ಬವನ್ನೂ ಸಂಭ್ರಮಿಸುವ ಸಮಯ ಇದು. ವರ್ಷದ ಮೊದಲ ಹಬ್ಬ ಸಂಕ್ರಾಂತಿ ಸುಗ್ಗಿಯ ಹಬ್ಬ.
ದೇಶಾದ್ಯಂತ ಬಹಳ ಉತ್ಸಾಹ ಮತ್ತು ಸಡಗರದಿಂದ ಸಂಕ್ರಾಂತಿ ಆಚರಿಸಲಾಗುತ್ತದೆ. ಆಂಧ್ರಪ್ರದೇಶದ ಪೆದ್ದ ಪಾಂಡುಗ, ಅಸ್ಸಾಂನ ಮಾಘ ಬಿಹು, ಉತ್ತರ ಭಾರತದಲ್ಲಿ ಲೋಹ್ರಿ, ತಮಿಳುನಾಡಿನ ಪೊಂಗಲ್, ಕರ್ನಾಟಕ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ ಮಕರ ಸಂಕ್ರಾಂತಿ ಹೀಗೆ ಅನೇಕ ಹೆಸರುಗಳಲ್ಲಿ ಕರೆಯಲ್ಪಡುವ ಸಂಭ್ರಮದ ಆಚರಣೆ ಇದು.
ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಸಂಕ್ರಾಂತಿಯನ್ನು ಆಚರಿಸಲು ಜೋಶ್, ಒಂದು ದೊಡ್ಡ ಅಭಿಯಾನವನ್ನು ಪ್ರಾರಂಭಿಸಿದೆ. ಕನ್ನಡ ಮತ್ತು ತೆಲುಗು ಕಮ್ಯೂನಿಟಿ ಕ್ರಿಯೇಟರ್‌ಗಳಿವೆ ತಮ್ಮ ಅಭಿಮಾನಿಗಳೊಂದಿಗೆ ಹಬ್ಬವನ್ನು ಆಚರಿಸಲು ಜೋಶ್ ವೇದಿಕೆ ಒದಗಿಸುತ್ತಿದೆ. ಅತಿ ಹೆಚ್ಚು ಪ್ರೇಕ್ಷಕರೊಂದಿಗೆ ಈ ವೇದಿಕೆಯಲ್ಲಿ ಸಂವಾದ ನಡೆಯಲಿದೆ. ಆದ್ದರಿಂದ ಜೋಶ್‌ನ ವಿಶೇಷ ಫಿಲ್ಟರ್‌ಗಳನ್ನು ಬಳಸಿಕೊಂಡು ಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸಿ. ವಿಡಿಯೋಗಳ ಮಹಾಪೂರವೇ ಹರಿದು ಬರಲಿದೆ ಅನ್ನೋದು ಎಲ್ಲರ ನಿರೀಕ್ಷೆ.
ಅಭಿಯಾನವು ಜನವರಿ 19 ರವರೆಗೆ ಲೈವ್ ಆಗಿರುತ್ತದೆ. ಫ್ಯಾಶನ್, ಫುಡ್, ಪ್ರಯಾಣ, DIY ನಂತಹ ಪ್ರಕಾರಗಳ ಜೊತೆಗೆ ಲಿಪ್ ಸಿಂಕ್, ಡ್ಯಾನ್ಸ್, ನಟನೆಯಂತಹ ಪ್ರತಿಭೆಯನ್ನು ನೀವು ಪ್ರದರ್ಶಿಸಬಹುದು. ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಲು ನಿಮಗೆ ಇದು ಸಹಾಯ ಮಾಡುತ್ತದೆ. ಕುತೂಹಲಕಾರಿ ಅಂಶವೆಂದರೆ ಜೋಶ್ ಸಂಕ್ರಾಂತಿಗಾಗಿ ವಿಶೇಷ ಕ್ಯಾಮೆರಾ ಫಿಲ್ಟರ್ ಅನ್ನು ಸಹ ರಚಿಸಿದೆ. ಅದನ್ನು ಇನ್ನಷ್ಟು ಆಕರ್ಷಕ ವಿಡಿಯೋಗಳಿಗಾಗಿ ನೀವು ಬಳಸಿಕೊಳ್ಳಬಹುದು. ಕ್ರಿಯೇಟರ್‌ಗಳ ಧ್ವನಿಯನ್ನು ಲಕ್ಷಾಂತರ ಅಭಿಮಾನಿಗಳಿವೆ ತಲುಪುವಂತೆ ಮಾಡುವುದು ಈ ಅಭಿಯಾನದ ಉದ್ದೇಶ. ಆದ್ದರಿಂದ ಜನರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಸಂಕ್ರಾಂತಿಯ ಸಂಭ್ರಮವನ್ನು ಜೊತೆಯಾಗಿ ಆಚರಿಸಲು ಈ ಸದಾವಕಾಶವನ್ನು ಬಳಸಿಕೊಳ್ಳಿ.