ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ವಿಷ್ಯದ ಬಗ್ಗೆಯೂ ಹೇಳಲಾಗಿದೆ. ಕನಸಿನಲ್ಲಿ ಯಾವ ವಸ್ತುಗಳು ಕಂಡ್ರೆ ಯಾವ ಸಂಕೇತ ಅಥವಾ ಭವಿಷ್ಯದಲ್ಲಿ ಏನಾಗಬಹುದು ಎಂಬುದನ್ನು ವಿವರವಾಗಿ ಹೇಳಲಾಗಿದೆ. ಪ್ರತಿಯೊಬ್ಬರಿಗೂ ಕನಸು ಬೀಳುತ್ತದೆ. ಕನಸಿನಲ್ಲಿ ಅನೇಕ ಪ್ರಾಣಿಗಳನ್ನು ನಾವು ನೋಡಿರ್ತೇವೆ. ಕನಸಿನಲ್ಲಿ ಯಾವ ಪ್ರಾಣಿ ಕಂಡ್ರೆ ಏನು ಸೂಚನೆ ಎಂಬುದನ್ನೂ ಶಾಸ್ತ್ರದಲ್ಲಿ ಹೇಳಲಾಗಿದೆ.
ಕನಸಿನಲ್ಲಿ ಮೀನು ಕಂಡ್ರೆ ಮನೆಯಲ್ಲಿ ಶುಭಕಾರ್ಯವಾಗಲಿದೆ ಎಂದರ್ಥ. ಕನಸಿನಲ್ಲಿ ಸರ್ಪವನ್ನು ಹಿಡಿದಂತೆ ಕಂಡರೆ ಸಫಲತೆ ಪ್ರಾಪ್ತಿಯಾಗಲಿದೆ ಎಂಬ ಸೂಚನೆಯಾಗಿದೆ. ಕನಸಿನಲ್ಲಿ ಗೂಬೆ ಕಂಡರೆ ಜೀವನದಲ್ಲಿ ದುಃಖ ಬರಲಿದೆ ಎಂಬ ಸೂಚನೆಯಾಗಿದೆ.
ಕನಸಿನಲ್ಲಿ ಕರಡಿ ಕಂಡರೆ ಅದನ್ನು ಮಂಗಳಕರವೆಂದು ಭಾವಿಸಲಾಗಿದೆ. ಸ್ವಪ್ನದಲ್ಲಿ ನಾಯಿ ಬೊಗಳಿದ ಶಬ್ದ ಕೇಳಿದ್ರೆ ಅದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಕನಸಿನಲ್ಲಿ ಕುದುರೆ ಕಾಣಿಸಿಕೊಂಡರೆ ಒಳ್ಳೆಯ ದಿನದ ಸಂಕೇತವಾಗಿದೆ. ಕನಸಿನಲ್ಲಿ ಇಲಿ ಕಾಣಿಸಿಕೊಂಡರೆ ನಿಮ್ಮ ಮನೆಯಲ್ಲಿ ಆರ್ಥಿಕ ವೃದ್ಧಿಯಾಗಲಿದೆ. ಸಂಪತ್ತಿನ ಆಗಮನವಾಗಲಿದೆ ಎಂಬ ಸೂಚನೆಯಾಗಿದೆ. ಹಾರುವ ಹಕ್ಕಿ ಕಾಣಿಸಿಕೊಂಡರೆ ಅದು ಗೌರವ ಸೂಚನೆಯಾಗಿದೆ. ಕನಸಿನಲ್ಲಿ ಹಲ್ಲಿ ಕಾಣಿಸಿಕೊಂಡರೆ ಯಶಸ್ಸು ಸಿಗಲಿದೆ ಎಂದರ್ಥ. ಅಚಾನಕ್ ಧನಾಗಮನ ಹಾಗೂ ಸಾಲದಿಂದ ಮುಕ್ತಿ ಸಿಗಲಿದೆ ಎಂಬುದನ್ನು ಇದು ಸೂಚಿಸುತ್ತದೆ. ಕನಸಿನಲ್ಲಿ ಮಾಂಸ ಸೇವನೆ ಮಾಡಿದಂತೆ ಕಂಡರೆ ಗಾಯಗಳಾಗುವ ಸಂಕೇತವಾಗಿದೆ. ಕನಸಿನಲ್ಲಿ ಕರಡಿ ಮಲಗಿರುವಂತೆ ಕಾಣಿಸಿಕೊಂಡರೆ ಜೀವನದಲ್ಲಿ ಮತ್ತಷ್ಟು ಸಂಘರ್ಷ ಮಾಡಬೇಕು ಎಂಬ ಸೂಚನೆಯಾಗಿದೆ. ನವಿಲನ್ನು ನೋಡುವುದು ದುಃಖ ಅಥವಾ ಕೆಟ್ಟ ಸುದ್ದಿ ಬರಲಿದೆ ಎಂಬುದನ್ನು ಸೂಚಿಸುತ್ತದೆ.