ಕೊಬ್ಬರಿ ಎಣ್ಣೆ(ತೆಂಗಿನ ಎಣ್ಣೆ)ಯನ್ನು ಸಾಮಾನ್ಯವಾಗಿ ಎಲ್ಲರೂ ಬಳಸುತ್ತಾರೆ. ತೆಂಗಿನ ಎಣ್ಣೆ ದೇಹದ ಸೌಂದರ್ಯಕ್ಕೆ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು. ಮಾಯಿಶ್ವರೈಸರ್ ಗಳಿಗಿಂತಲೂ ಪರಿಣಾಮಕಾರಿಯಾಗಿ ಕೊಬ್ಬರಿ ಎಣ್ಣೆ ಕೆಲಸ ಮಾಡುತ್ತದೆ.
ಪ್ರತಿದಿನ ಮುಖಕ್ಕೆ ಕೊಬ್ಬರಿ ಎಣ್ಣೆ ಹಚ್ಚಿಕೊಳ್ಳುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ. ಇನ್ನು ಮೇಕಪ್ ಒರೆಸುವಾಗ ತೆಂಗಿನ ಎಣ್ಣೆ ಹಚ್ಚಿಕೊಂಡಲ್ಲಿ ತೆಗೆಯಲು ಸುಲಭವಾಗುತ್ತದೆ.
ಇನ್ನು ಕೂದಲು ಆರೈಕೆಗೆ ಕೊಬ್ಬರಿ ಎಣ್ಣೆ ಅತ್ಯುತ್ತಮವಾದುದು. ಕೊಬ್ಬರಿ ಎಣ್ಣೆ ಬಳಸುವುದರಿಂದ ಕೂದಲಿನ ಕೋಮಲತೆ ಕಾಪಾಡಿಕೊಳ್ಳಬಹುದು. ಇನ್ನು ಕೊಬ್ಬರಿ ಎಣ್ಣೆಯನ್ನು ಸ್ವಲ್ಪ ಕಾಯಿಸಿ ಕೂದಲಿನ ಬುಡಕ್ಕೆ ಹಚ್ಚಿಕೊಳ್ಳುವುದರಿಂದ ಕೂದಲು ಸದೃಢವಾಗುತ್ತದೆ.
ಅಡುಗೆಯಲ್ಲಿಯೂ ತೆಂಗಿನ ಎಣ್ಣೆ ಬಳಸಿದರೆ ಆರೋಗ್ಯಕ್ಕೆ ಒಳ್ಳೆಯದು. ಕೊಬ್ಬು ಕರಗಿಸಿ ದೇಹದ ತೂಕವನ್ನು ನಿಯಂತ್ರಣದಲ್ಲಿಡಬಹುದು ಎನ್ನುತ್ತಾರೆ ತಿಳಿದವರು. ಆಹಾರದಲ್ಲಿ ತೆಂಗಿನ ಎಣ್ಣೆ ಬಳಕೆಯಿಂದ ಜೀರ್ಣಕ್ರಿಯೆ ವೃದ್ಧಿಯಾಗುತ್ತದೆ. ಸೌಂದರ್ಯ ಹಾಗೂ ಆರೋಗ್ಯಕ್ಕೆ ತೆಂಗಿನ ಎಣ್ಣೆ ಉತ್ತಮ ಎನ್ನುವುದು ಅನೇಕರ ಅಭಿಪ್ರಾಯವಾಗಿದೆ.