ನಿರುದ್ಯೋಗ ಸಮಸ್ಯೆ ದಿನ ದಿನಕ್ಕೂ ಹೆಚ್ಚಾಗ್ತಿದೆ. ಉನ್ನತ ಮಟ್ಟದ ಶಿಕ್ಷಣ ಪಡೆದವರು ಕಡಿಮೆ ಸಂಬಳಕ್ಕೆ ಕೆಲಸ ಮಾಡ್ತಿದ್ದಾರೆ. ಲಕ್ಷಾಂತರ ರೂಪಾಯಿ ಸಂಬಳ ಪಡೆಯುವುದು ಕನಸಿನ ಮಾತಾಗಿದೆ. ಒಳ್ಳೆ ಉದ್ಯೋಗ, ಕೈತುಂಬ ಸಂಬಳ ಪ್ರತಿಯೊಬ್ಬರ ಗುರಿ. ಶಾಸ್ತ್ರದಲ್ಲಿ ಉತ್ತಮ ನೌಕರಿ ಪಡೆಯುವ ಉಪಾಯವನ್ನು ಹೇಳಲಾಗಿದೆ.
ಉತ್ತಮ ಸಂಬಳವಿರುವ ಉದ್ಯೋಗ ಬಯಸುವವರು ಪವನಸುತ ಹನುಮಂತನ ಚಿತ್ರವನ್ನು ಮನೆಗೆ ತನ್ನಿ. ಹನುಮಂತ ಹಾರುತ್ತಿರುವ ಚಿತ್ರವಿದ್ದರೆ ಒಳ್ಳೆಯದು. ಇದನ್ನು ದೇವರ ಮನೆಯಲ್ಲಿಟ್ಟು ವಿಧಿ-ವಿಧಾನದಿಂದ ಪೂಜೆ ಮಾಡಿ. ಇದ್ರಿಂದ ಸಾಕಷ್ಟು ಲಾಭವಿದೆ. ಕೆಲವೇ ದಿನಗಳಲ್ಲಿ ನಿಮ್ಮ ಅದೃಷ್ಟ ಬದಲಾಗಲಿದೆ.
ನಿಂಬೆ ಹಣ್ಣು ಕೂಡ ನಿಮ್ಮ ಅದೃಷ್ಟವನ್ನು ಬದಲಿಸಲಿದೆ. ಹಳದಿ ಬಣ್ಣದ ನಿಂಬೆ ಹಣ್ಣನ್ನು ಮನೆಗೆ ತಂದು ಅದನ್ನು ಸಮನಾಗಿ ನಾಲ್ಕು ಹೋಳು ಮಾಡಿ. ಸಂಜೆ ಸಮಯದಲ್ಲಿ ನಾಲ್ಕು ರಸ್ತೆ ಕೂಡುವ ಜಾಗಕ್ಕೆ ಹೋಗಿ ನಾಲ್ಕೂ ರಸ್ತೆಗೆ ನಿಂಬೆ ಹೋಳನ್ನು ಇಟ್ಟು ಬನ್ನಿ. ಅಪ್ಪಿತಪ್ಪಿಯೂ ತಿರುಗಿ ನೋಡಬೇಡಿ. ಇದು ನಿಮ್ಮ ಮೇಲೆ ಬಹು ಬೇಗ ಪ್ರಭಾವ ಬೀರುತ್ತದೆ. ನೆನಪಿರಲಿ ಸತತ 7 ದಿನಗಳ ಕಾಲ ಇದನ್ನು ಮಾಡಬೇಕಾಗುತ್ತದೆ.