ಮನೆಯಿಂದ ಹೊರ ಬೀಳುವಾಗ ಹೋಗುವ ಕೆಲಸ ಮಂಗಳಕರವಾಗಲಿ ಎಂದು ಎಲ್ಲರೂ ಬಯಸ್ತಾರೆ. ಮನೆಯಿಂದ ಹೊರ ಬೀಳುವಾಗ ಕೆಲವೊಂದು ಅಶುಭ ಸಂಕೇತ ಸಿಗುತ್ತದೆ. ಅದು ಹೋದ ಕೆಲಸದ ಯಶಸ್ಸಿಗೆ ಅಡ್ಡಿಯುಂಟು ಮಾಡುತ್ತದೆ. ಶತ-ಶತ ಮಾನಗಳಿಂದಲೂ ಕೆಲವೊಂದು ಶುಭ-ಅಶುಭಗಳು ಪ್ರಚಲಿತದಲ್ಲಿವೆ.
ಮನೆಯಿಂದ ಹೊರ ಹೋಗುವಾಗ ಯಾರಾದ್ರೂ ಸೀನಿದ್ರೆ ಅದು ಅಶುಭ ಸಂಕೇತ. ನೆಗಡಿ ಅಥವಾ ಬದಲಾದ ವಾತಾವರಣದಿಂದ ಸೀನು ಬಂದಲ್ಲಿ ಅದನ್ನು ಪರಿಗಣಿಸಬಾರದು. ಅಚಾನಕ್ ಸೀನು ಬಂದಲ್ಲಿ ಅದನ್ನು ಅಶುಭವೆನ್ನಲಾಗುತ್ತದೆ. ಎರಡಕ್ಕಿಂತ ಹೆಚ್ಚು ಸೀನು ಬಂದಲ್ಲಿ ಅದು ಶುಭ ಸಂಕೇತ. ಒಂಟಿ ಸೀನು ಬಂದ್ರೆ ಅಥವಾ ಕೇಳಿದ್ರೆ 2 ನಿಮಿಷ ಮನೆಯಲ್ಲಿ ಕುಳಿತು ನಂತ್ರ ಹೊರಡಿ.
ಮನೆಯಿಂದ ಹೊರಡುವಾಗ ವೀಳ್ಯದೆಲೆ, ಮೀನು, ಆನೆ ಕಣ್ಣಿಗೆ ಕಾಣಿಸಿಕೊಂಡರೆ ಅದು ಶುಭಕರ. ಹಾಲು, ಖಾಲಿ ಪಾತ್ರೆ, ಕಸ, ಕಾಣಿಸಿಕೊಂಡಲ್ಲಿ ಅದು ಅಶುಭ.
ಮನೆಯಿಂದ ಹೊರ ಬಿದ್ದಾಗ ಕಾಲು ಕೆಸರು ಅಥವಾ ಸಗಣಿಯಲ್ಲಿ ಬಿದ್ದರೆ ಅಶುಭ ಸಂಕೇತ. ನೀವು ಕಷ್ಟಕ್ಕೆ ಬೀಳಲಿದ್ದೀರಿ ಎಂಬ ಸಂಕೇತ. ಮನೆಯಿಂದ ಹೊರ ಬಂದ ಸಂದರ್ಭದಲ್ಲಿ ಭಿಕ್ಷುಕ ಎದುರು ಬಂದಲ್ಲಿ ಭಿಕ್ಷೆ ನೀಡಿ. ಇದ್ರಿಂದ ಸಾಲ ಕೊನೆಗೊಳ್ಳಲಿದೆ ಎಂಬ ಸಂಕೇತ.