ಕಿರುತೆರೆ ನಟಿಯಿಂದ ಹೈಟೆಕ್ ವೇಶ್ಯಾವಾಟಿಕೆ; ಡೀಲ್ ಕುದುರಿಸುತ್ತಿರುವಾಗಲೇ ಅರೆಸ್ಟ್

ಮುಂಬೈನಲ್ಲಿ ಕಿರುತೆರೆ ನಟಿಯೊಬ್ಬರು ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದು, ಇದರ ಸುಳಿವು ಸಿಕ್ಕಬಳಿಕ ಗ್ರಾಹಕರ ಸೋಗಿನಲ್ಲಿ ತೆರಳಿದ್ದ ಪೊಲೀಸರಿಗೆ ಡೀಲ್ ಕುದುರಿಸುತ್ತಿರುವಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಇದೀಗ ನಟಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

‘ಅಪ್ನಾಪನ್’ ಸೇರಿದಂತೆ ಕಿರುತೆರೆಯ ಹಲವು ಧಾರವಾಹಿಗಳಲ್ಲಿ ಅಭಿನಯಿಸಿದ್ದ ಆರತಿ ಹರೀಶ್ ಚಂದ್ರ ಮಿತ್ತಲ್ ಸಿಕ್ಕಿಬಿದ್ದವರಾಗಿದ್ದು, ಇತ್ತೀಚೆಗೆ ಹಿರಿ ತೆರೆಗೂ ತಾವು ಕಾಲಿಡುತ್ತಿರುವುದಾಗಿ ಆಕೆ ಹೇಳಿದ್ದರು. ವೇಶ್ಯಾವಾಟಿಕೆಯಲ್ಲಿ ನಟಿ ಸಿಕ್ಕಿರುವ ವಿಚಾರ ಈಗ ಬಾಲಿವುಡ್ ನಲ್ಲಿ ಸಂಚಲನ ಮೂಡಿಸಿದೆ.

ಆರತಿ, ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿರುವ ಮಾಹಿತಿ ಪಡೆದುಕೊಂಡಿದ್ದ ಪೊಲೀಸರು ಗ್ರಾಹಕರಂತೆ ತೆರಳಿದ್ದರು. ಇಬ್ಬರು ಯುವತಿಯರನ್ನು ಹೋಟೆಲ್ ಗೆ ಕಳಿಸುವಂತೆ ಕೇಳಿದ ಸಂದರ್ಭದಲ್ಲೇ 60,000 ರೂಪಾಯಿಗೆ ನಟಿ ಬೇಡಿಕೆ ಇಟ್ಟಿದ್ದರು.

ತಮ್ಮ ಕಾರ್ಯಾಚರಣೆಯ ಪ್ರತಿಯೊಂದು ಹಂತವನ್ನು ರೆಕಾರ್ಡ್ ಮಾಡಿಕೊಂಡಿದ್ದ ಪೊಲೀಸರು ಬಳಿಕ ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದು, ವಿಚಾರಣೆ ವೇಳೆ ತಾನು ಕಳುಹಿಸಿಕೊಡುತ್ತಿದ್ದ ಪ್ರತಿ ಮಾಡೆಲ್ ಗೆ 15,000 ರೂಪಾಯಿ ನೀಡುತ್ತಿದ್ದ ಆಕೆ ಮಿಕ್ಕ ಹಣವನ್ನು ತಾನು ಇಟ್ಟುಕೊಳ್ಳುತ್ತಿದ್ದಳು ಎನ್ನಲಾಗಿದೆ. ಇದೀಗ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read