ಹಾಲು ಒಡೆದು ಹೋಗೋದು ಸಾಮಾನ್ಯ ಸಂಗತಿ. ಕುದಿಸಿದ ಹಾಲಾಗಿರಲಿ, ತಣ್ಣಗಿನ ಹಾಲಿರಲಿ, ಒಡೆದ ಹಾಲಾಗಿರಲಿ ಎಲ್ಲದರಲ್ಲೂ ಬಹಳಷ್ಟು ಪೋಷಕಾಂಶವಿರುತ್ತದೆ. ಇದು ಕೆಲವರಿಗೆ ತಿಳಿದಿಲ್ಲ. ಹಾಗಾಗಿ ಒಡೆದ ಹಾಲನ್ನು ಅನೇಕರು ಚೆಲ್ಲಿಬಿಡ್ತಾರೆ. ಒಡೆದ ಹಾಲಿನಿಂದ ರುಚಿರುಚಿ ಆರೋಗ್ಯಕರ ತಿಂಡಿ ತಯಾರಿಸಬಹುದು.
ರಸ್ ಗುಲ್ಲಾ ಮತ್ತು ಬರ್ಫಿ : ಒಂದು ಒಣಗಿದ ಪಾತ್ರೆಗೆ ಒಡೆದ ಹಾಲನ್ನು ಹಾಕಿ. ಅವಶ್ಯಕತೆಗೆ ತಕ್ಕಷ್ಟು ಸಕ್ಕರೆಯನ್ನು ಹಾಕಿ. ನೀರು ಆರುವವರೆಗೆ ಇದನ್ನು ಬಿಸಿ ಮಾಡಿ. ಕೊನೆಯಲ್ಲಿ ಉಳಿಯುವ ಕಣಕದಿಂದ ರಸ್ ಗುಲ್ಲಾ ಅಥವಾ ಬರ್ಫಿ ತಯಾರಿಸಿ.
ಪನ್ನೀರ್ : ಒಡೆದ ಹಾಲನ್ನು ಚೆನ್ನಾಗಿ ಕುದಿಸಿ. ನಂತ್ರ ಸ್ವಚ್ಛವಾಗಿರುವ ಬಟ್ಟೆಯೊಳಗೆ ಒಡೆದ ಹಾಲನ್ನು ಹಾಕಿ ಬಿಗಿಯಾಗಿ ಕಟ್ಟಿಡಿ. ಕೆಲ ಗಂಟೆಗಳಲ್ಲಿ ಪನ್ನೀರು ಸಿದ್ಧವಾಗುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಪನ್ನೀರಿಗಿಂತ ಇದು ತಾಜಾ ಹಾಗೂ ಮೃದುವಾಗಿರುತ್ತದೆ.
ಮೊಸರು : ಒಡೆದ ಹಾಲನ್ನು ಮೊಸರು ಮಾಡಿ ತಿನ್ನಬಹುದು. ಒಡೆದ ಹಾಲಿಗೆ ಸ್ವಲ್ಪ ಮೊಸರು ಹಾಕಿಟ್ಟರೆ ಮೊಸರಿನ ರುಚಿ ಹೆಚ್ಚಾಗುತ್ತದೆ.
ಸೂಪ್ : ಸೂಪ್ ಮಾಡ್ತಾ ಇದ್ದರೆ ನೀರಿನ ಬದಲು ಒಡೆದ ಹಾಲಿನ ನೀರನ್ನು ಬಳಸಬಹುದು. ಇದು ಸೂಪ್ ರುಚಿಯನ್ನು ಹೆಚ್ಚಿಸುತ್ತದೆ.