ತಮ್ಮ ಕಂಪನಿಯ ಉದ್ಯೋಗಿ ಶಾಂಕಿ ಚೌಹಾನ್ ಎಂಬವರನ್ನು ಹೊಗಳಿ, ಶಂತನು ದೇಶಪಾಂಡೆ ಪೋಸ್ಟ್ ಒಂದನ್ನು ಹಾಕಿದ್ದು, ಅವರು ನಮ್ಮ ಕಂಪನಿಯ ಆಸ್ತಿ ಎಂದು ಬರೆದುಕೊಂಡಿದ್ದಾರೆ. ಕಂಪನಿಯ ಕುರಿತು ಮಾತನಾಡುವಾಗ ಅವರ ಕಣ್ಣುಗಳು ಮಿನುಗುತ್ತವೆ ಎಂದು ಶಂತನು ಹೇಳಿದ್ದು, ಆದರೆ ಒಂದು ಫೋಟೋ ನೆಟ್ಟಿಗರಿಗೆ ಇಷ್ಟವಾಗಿಲ್ಲ.
ಅದರಲ್ಲಿ ಉದ್ಯೋಗಿ ಆಟೋದಲ್ಲಿಯೇ ನಿದ್ರೆ ಮಾಡಿಕೊಂಡು ಬರುತ್ತಿದ್ದು, ವಿಮಾನ ಪ್ರಯಾಣ ಹಾಗೂ ಮ್ಯಾರಥಾನ್ ಮೀಟಿಂಗ್ ಗಳಿಂದ ಅವರು ದಣಿದಿದ್ದರು ಎನ್ನಲಾಗಿದೆ. ಇದೇ ಫೋಟೋವನ್ನು ಇಟ್ಟುಕೊಂಡು ನೆಟ್ಟಿಗರು ಶಂತನು ದೇಶಪಾಂಡೆ ಅವರ ಕಾಲು ಎಳೆಯುತ್ತಿದ್ದು, ಒಬ್ಬರು ‘ಬಾಂಬೆ ಸ್ಲೇವಿಂಗ್ ಕಂಪನಿ’ ಎಂದು ಕಿಚಾಯಿಸಿದ್ದಾರೆ. ಮತ್ತೆ ಕೆಲವರು ಶಂತನು ದೇಶಪಾಂಡೆ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
https://twitter.com/sachyy901/status/1627215366136164353?ref_src=twsrc%5Etfw%7Ctwcamp%5Etweetembed%7Ctwterm%5E1627215366136164353%7Ctwgr%5E923eeff28edd966ab01e7fb6ae5e544b17be786e%7Ctwcon%5Es1_&ref_url=https%3A%2F%2Fwww.news18.com%2Fbuzz%2Findian-ceo-slammed-over-linkedin-post-praising-tired-employee-asleep-in-autorickshaw-7130203.html