HomeLive Newsಶಾಲಾ ಆವರಣದಲ್ಲಿ ಮಲಗಿದ್ದ ನಾಯಿ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಕಿಡಿಗೇಡಿ: ಜೀವ ಉಳಿಸಿಕೊಳ್ಳಲು...

ಶಾಲಾ ಆವರಣದಲ್ಲಿ ಮಲಗಿದ್ದ ನಾಯಿ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಕಿಡಿಗೇಡಿ: ಜೀವ ಉಳಿಸಿಕೊಳ್ಳಲು ಮೂಕಪ್ರಾಣಿಯ ನರಳಾಟ

ದೇವನಹಳ್ಳಿ: ಶಾಲಾ ಆವರಣದಲ್ಲಿ ತನ್ನ ಪಾಡಿಗೆ ತಾನು ಮಲಗಿದ್ದ ನಾಯಿ ಮೇಲೆ ಕಿಡಿಗೇಡಿಯೊಬ್ಬ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು, ಜೀವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮೂಕ ಪ್ರಾಣಿ ನರಳುತ್ತಾ ಇಡೀ ಊರಿನಲ್ಲಿ ಓಡಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ ನಡೆದಿದೆ.

ಮಹೇಶ್ ಎಂಬ ಪುಂಡನೊಬ್ಬ ನಾಯಿ ಮೇಲೆ ಎಳನೀರು ಕಡಿಯುವ ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಹಲ್ಲೆಗೊಳಗಾಗಿರುವ ನಾಯಿ ರಕ್ತದ ಮಡುವಲ್ಲಿ ನರಳಾಡಿದೆ. ದೇವನಹಳ್ಳಿ ತಾಲೂಕಿನ ಚಿನ್ನ ಕೆಂಪನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇದನ್ನು ಕಂಡ ಸ್ಥಳೀಯರು ನಾಯಿ ಮಾಲೀಕನಿಗೆ ವಿಷಯ ತಿಳಿಸಿದ್ದಾರೆ.

ಸದ್ಯ ನಾಯಿಯನ್ನು ರಕ್ಷಿಸಿ ಚಿಕಿತ್ಸೆ ನೀಡಲಾಗಿದೆ. ಕುಡಿದ ಮತ್ತಿನಲ್ಲಿ ಯುವಕನೊಬ್ಬ ಮೂಕ ಪ್ರಾಣಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದು, ಇದು ಖಂಡನೀಯ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular