ಪ್ರಪಂಚದ ಪ್ರತಿಯೊಂದು ಜೀವಿ, ವಸ್ತುಗಳಿಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಅದ್ರದೆ ಆದ ಮಹತ್ವ ನೀಡಲಾಗಿದೆ. ಚೇಳನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತಾರೆ. ನೋಡಲು ಇದು ಭಯ ಹುಟ್ಟಿಸುವಂತಿರುತ್ತದೆ. ಇದು ಕಚ್ಚಿದ್ರೆ ನೋವು ಸಹಿಸಿಕೊಳ್ಳೋದು ಕಷ್ಟ. ಇದು ಕಣ್ಣಿಗೆ ಬಿದ್ರೆ ಯಾವ ಫಲ ಎಂಬುದನ್ನು ಶಾಸ್ತ್ರದಲ್ಲಿ ಹೇಳಲಾಗಿದೆ.
ಚೇಳು ವ್ಯಕ್ತಿಯ ತಲೆಯ ಮೇಲೆ ಬಿದ್ರೆ ಅಶುಭ ಫಲ. ಸಂಕಟ ಎದುರಾಗಲಿದೆ ಎಂಬುದರ ಸಂಕೇತ. ಮನೆಯಿಂದ ಹೊರಗೆ ಹೋಗುವ ವೇಳೆ ಚೇಳು ಕಾಣಿಸಿಕೊಂಡ್ರೆ ಶುಭಕರ. ಎಡಭಾಗದಲ್ಲಿ ಚೇಳು ಕಂಡ್ರೆ ಹೋಗುತ್ತಿರುವ ಕೆಲಸ ಫಲ ನೀಡುತ್ತದೆ ಎಂಬುದರ ಸಂಕೇತ.
ನಡೆಯುವ ವೇಳೆ ಬಲ ಭಾಗದಲ್ಲಿ ಚೇಳು ಕಂಡ್ರೆ ಅದನ್ನು ಅಶುಭವೆಂದು ಪರಿಗಣಿಸಲಾಗಿದೆ. ಜಗಳ, ಘರ್ಷಣೆಯಿಂದ ಬಳಲುತ್ತಾನಂತೆ. ಮಾನಸಿಕ ತೊಂದರೆ ಕಾಡುತ್ತದೆಯಂತೆ. ಅಶುಭ ಫಲ ಸಿಕ್ಕಾಗ ವಿಷ್ಣು ಸಹಸ್ರನಾಮವನ್ನು ಪಠಿಸಿದ್ರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ.