alex Certify ಈ ರಾಶಿಯವರಿಗೆ ಇಂದು ಕಾದಿದೆ ಅನಿರೀಕ್ಷಿತ ಉಡುಗೊರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗೆ ಇಂದು ಕಾದಿದೆ ಅನಿರೀಕ್ಷಿತ ಉಡುಗೊರೆ

ಮೇಷ : ಇಂದು ನಿಮಗೆ ಆರೋಗ್ಯ ಕೈ ಕೊಡುವ ಸಾಧ್ಯತೆ ಇದೆ. ನಿಮ್ಮ ಸಂಗಾತಿಯು ನಿಮ್ಮ ಮಾತನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂಬ ಕೊರಗು ನಿಮ್ಮನ್ನು ಇನ್ನಷ್ಟು ಕಾಡಲಿದೆ. ವಿದ್ಯಾರ್ಥಿಗಳಿಗೆ ಇಂದು ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿದೆ.

ವೃಷಭ : ಮಕ್ಕಳ ಶಿಕ್ಷಣದ ದೃಷ್ಟಿಯಿಂದ ದೊಡ್ಡ ಮೊತ್ತದ ಹಣವನ್ನು ಹೊಂದಿಸಬೇಕಾಗಿ ಬರುತ್ತದೆ. ಸಂಗಾತಿಯೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲಿದ್ದೀರಿ. ಕುಟುಂಬದಲ್ಲಿ ಎಲ್ಲಾ ರೀತಿಯಿಂದಲೂ ನೆಮ್ಮದಿ ನೆಲಸಲಿದೆ. ಕೋರ್ಟ್ – ಕಚೇರಿ ವ್ಯವಹಾರಗಳಲ್ಲಿ ಮುನ್ನಡೆ ಇದೆ.

ಮಿಥುನ : ಇಂದು ನೀವು ಆಧ್ಯಾತ್ಮಿಕ ಜೀವನದತ್ತ ಹೆಚ್ಚು ವಾಲುವ ಸಾಧ್ಯತೆ ಇದೆ. ಮಕ್ಕಳು ನಿಮ್ಮ ಮುಂದೆ ಅನೇಕ ಬೇಡಿಕೆಗಳನ್ನು ಇಡುವ ಸಾಧ್ಯತೆ ಇದೆ. ಆದಷ್ಟು ಹಣವನ್ನು ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವುದನ್ನು ರೂಢಿಸಿಕೊಳ್ಳಿ. ಇದರಿಂದ ಮುಂದಿನ ದಿನಗಳಲ್ಲಿ ನಿಮಗೇ ಲಾಭವಿದೆ.

ಕಟಕ : ಕಚೇರಿಯಲ್ಲಿ ಯಾರನ್ನೋ ಮೆಚ್ಚಿಸಲು ಕೆಲಸ ಮಾಡಲು ಹೋಗಬೇಡಿ. ನಿಮ್ಮ ಬುದ್ಧಿಶಕ್ತಿಯಿಂದ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತ ಕೆಲಸಗಳನ್ನು ಮಾಡಿ. ಸಂಗಾತಿಯು ದೂರ ಇರುವುದರಿಂದ ಒಂಟಿತನ ನಿಮ್ಮನ್ನು ಇಂದು ತುಸು ಹೆಚ್ಚೇ ಕಾಡಲಿದೆ. ಮಕ್ಕಳ ಸಾಧನೆಯು ನಿಮಗೆ ದೊಡ್ಡ ಮಟ್ಟದ ಖುಷಿಯನ್ನು ತರಲಿದೆ.

ಸಿಂಹ : ಇಂದು ಸಹೋದ್ಯೋಗಿಗಳ ಜೊತೆ ಮೋಜು ಮಸ್ತಿ ಮಾಡಲಿದ್ದೀರಿ. ಇದರಿಂದ ನಿಮ್ಮ ಸಮಯ ವ್ಯರ್ಥವಾಗಲಿದೆ. ವೈವಾಹಿಕ ಜೀವನದಲ್ಲಿ ಅಡ್ಡಿ ಆತಂಕಗಳು ಎದುರಾಗಲಿವೆ. ಆರೋಗ್ಯ ಏರುಪೇರು ಆಗಲಿದೆ. ಮನೆ ಮದ್ದಿನ ಮೂಲಕವೇ ಪರಿಹಾರ ಕಂಡುಕೊಳ್ಳಬಹುದು.

ಕನ್ಯಾ : ಅತಿಯಾದ ಕೋಪ ಸಂಗಾತಿಯ ಜೊತೆ ದೊಡ್ಡ ಸಂಘರ್ಷಕ್ಕೆ ನಾಂದಿ ಹಾಡಲಿದೆ. ಹಣಕಾಸಿನ ಸಂಕಷ್ಟವು ತಪ್ಪಿದ್ದಲ್ಲ. ಖರ್ಚಿನ ವಿಚಾರದಲ್ಲಿ ಉದಾರ ಬುದ್ಧಿಯನ್ನು ಬಿಟ್ಟಲ್ಲಿ ನಿಮಗೇ ಒಳ್ಳೆಯದು. ಎಣ್ಣೆ ಪದಾರ್ಥಗಳ ಸೇವನೆ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.

ತುಲಾ : ಹಳೆಯ ಸಾಲಗಳು ತೀರುವುದರಿಂದ ನಿಮ್ಮ ಹಣಕಾಸಿನ ಸಮಸ್ಯೆಗಳು ನೀಗಲಿದೆ. ನಿಮ್ಮ ಪ್ರೇಮ ಪ್ರಕರಣವನ್ನು ಎಲ್ಲರ ಎದುರು ಸಾರಬೇಡಿ. ಮುಂದೆ ಇದು ನಿಮಗೆ ಮಾರಕ ಎನಿಸಲಿದೆ. ಸಂಗಾತಿಯು ನಿಮ್ಮೆಲ್ಲ ಕೆಲಸಗಳಿಗೆ ಸಾಥ್​ ನೀಡಲಿದ್ದಾರೆ. ಉದಾರ ಮನೋಭಾವ ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿದೆ.

ವೃಶ್ಚಿಕ : ಬಹಳ ದಿನಗಳಿಂದ ನೆನೆಗುದಿಗೆ ಬಿದ್ದ ಕಾರ್ಯವು ಇಂದು ಪೂರ್ಣಗೊಳ್ಳಲಿದೆ. ಸ್ನೇಹಿತರಿಂದ ಅನಿರೀಕ್ಷಿತ ಉಡುಗೊರೆಗಳು ನಿಮ್ಮನ್ನು ತಲುಪಲಿದೆ. ಕಚೇರಿ ಕೆಲಸದ ನಿಮಿತ್ತ ಪ್ರವಾಸ ಕೈಗೊಳ್ಳುವಿರಿ. ಹಣದ ಕೊರತೆಯು ನಿಮ್ಮನ್ನು ಒತ್ತಡಕ್ಕೀಡು ಮಾಡಲಿದೆ.

ಧನು : ನಿಮ್ಮ ವೈಯಕ್ತಿಕ ವಿಚಾರಗಳನ್ನು ತೀರಾ ಇನ್ನೊಬ್ಬರ ಎದುರು ಹೇಳಿಕೊಳ್ಳಬೇಡಿ. ಪ್ರವಾಸ ಕೈಗೊಳ್ಳುವುದರಿಂದ ನಿಮಗೆ ನಿರಾಳ ಎನಿಸಲಿದೆ. ಸಣ್ಣ ಸಣ್ಣ ವಿಷಯಕ್ಕೆ ಸಂಗಾತಿಯನ್ನು ಟೀಕೆ ಮಾಡಬೇಡಿ.

ಮಕರ : ತಂದೆಯ ಸಲಹೆಯು ನಿಮ್ಮನ್ನು ಬಹುದೊಡ್ಡ ನಷ್ಟದಿಂದ ಕಾಪಾಡಲಿದೆ. ಹೊಸ ಸ್ನೇಹಿತರು ಇಂದು ನಿಮ್ಮನ್ನು ಭೇಟಿಯಾಗಲಿದ್ದಾರೆ. ಸಂಗಾತಿಯು ನಿಮ್ಮ ಮೇಲೆ ಮುನಿಸು ಮಾಡಿಕೊಳ್ಳಬಹುದು. ಕೆಲಸದ ಸ್ಥಳದಲ್ಲಿ ಮೇಲಾಧಿಕಾರಿಗಳಿಂದ ಮೆಚ್ಚುಗೆ ಸಿಗಲಿದೆ.

ಕುಂಭ : ಇಂದು ನೀವು ರಾಜಕೀಯ ವ್ಯಕ್ತಿಗಳನ್ನು ಮೊದಲ ಬಾರಿಗೆ ಭೇಟಿ ಮಾಡೋದ್ರಿಂದ ನಿಮ್ಮಲ್ಲಿ ಕೊಂಚ ಅಳುಕಂತೂ ಇರಲಿದೆ. ತೀರಾ ಗಾಬರಿಯಾಗುವ ಅಗತ್ಯವಿಲ್ಲ. ನೀವು ಸಾಲ ನೀಡಿದ್ದರೆ ಆ ವ್ಯಕ್ತಿಯು ಇಂದು ಹಣವನ್ನು ಮರಳಿ ನೀಡಲಿದ್ದಾರೆ.

ಮೀನ : ನಿಮ್ಮ ಸಂಗಾತಿಯು ಇಂದು ವೃತ್ತಿ ಜೀವನದಲ್ಲಿ ದೊಡ್ಡ ಸಾಧನೆಯನ್ನೇ ಮಾಡಲಿದ್ದಾರೆ. ಇದು ನಿಮ್ಮ ಸಂತೋಷವನ್ನು ಇಮ್ಮಡಿಗೊಳಿಸಲಿದೆ. ಕುಟುಂಬದ ಏಳ್ಗೆಗಾಗಿ ಶ್ರಮಿಸಲಿದ್ದೀರಿ. ಕಂಕಣ ಭಾಗ್ಯ ಕೂಡಿ ಬರಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...