ಈ ಕೃಷಿ ಶುರು ಮಾಡಿ ಗಳಿಸಿ ಅಧಿಕ ಲಾಭ

ಕಚೇರಿಯಲ್ಲಿ ಕೆಲಸ ಮಾಡಿ ಸುಸ್ತಾಗಿರುವ ಜನರು ಕೃಷಿ, ಸ್ವಂತ ಉದ್ಯೋಗದತ್ತ ಮುಖ ಮಾಡ್ತಿದ್ದಾರೆ. ನೀವೂ ಸ್ವಂತ ಕೃಷಿ ಬಗ್ಗೆ ಆಲೋಚನೆ ಮಾಡ್ತಿದ್ದರೆ ಅರಿಶಿನದ ಕೃಷಿ ನಿಮ್ಮ ಕೈ ಹಿಡಿಯಲಿದೆ. ಕಡಿಮೆ ಬಂಡವಾಳದಲ್ಲಿ ಇದನ್ನು ಶುರು ಮಾಡಬಹುದು.

ಮಸಾಲೆ ಬೆಳೆಗಳಲ್ಲಿ ಅರಿಶಿನ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಆಹಾರದ ಜೊತೆ ಪೂಜೆ ಕಾರ್ಯಗಳಿಗೆ ಅರಿಶಿನದ ಅಗತ್ಯವಿದೆ. ಅರಿಶಿನವನ್ನು ಔಷಧಿ ರೂಪದಲ್ಲಿಯೂ ಬಳಸಲಾಗುತ್ತದೆ. ಅರಿಶಿನ ಬೆಳೆದು ಕೈತುಂಬ ಹಣ ಸಂಪಾದನೆ ಮಾಡಬಹುದು.  ಅತ್ಯಂತ ಮುಖ್ಯವಾದ ವಿಷಯವೆಂದರೆ, ಆರು ತಿಂಗಳ ನಂತರ ಬೆಳೆ ನಿಮ್ಮ ಕೈ ಸೇರುತ್ತದೆ.

ಅರಿಶಿನದಲ್ಲಿ ಸಾಕಷ್ಟು ವಿಧಗಳಿವೆ. ಅರಿಶಿನ ಕೃಷಿಯನ್ನು ವಿವಿಧ ಉಷ್ಣವಲಯದ ಪ್ರದೇಶಗಳಲ್ಲಿ, ಸಮುದ್ರ ಮಟ್ಟದಿಂದ 1500 ಮೀಟರ್ ಎತ್ತರದಲ್ಲಿ ಮಾಡಲಾಗುತ್ತದೆ. ಇದನ್ನು ಮರಳು, ಜೇಡಿಮಣ್ಣು, ಸೇರಿದಂತೆ ವಿವಿಧ ಮಣ್ಣಿನಲ್ಲಿ ಬೆಳೆಯಲಾಗುತ್ತದೆ. ಮಣ್ಣಿನ ಪಿಎಚ್ ಮೌಲ್ಯವು 4.5 ರಿಂದ 7.5 ಆಗಿರಬೇಕು. ಹೊಲವನ್ನು ಸರಿಯಾಗಿ ಉಳುಮೆ ಮಾಡುವ ಮೂಲಕ ಮಣ್ಣನ್ನು ಚೆನ್ನಾಗಿ ಹದಗೊಳಿಸಬೇಕು. ಅರಿಶಿನ ಬೆಳೆಗೆ ಆರಂಭಿಕ ನೀರಾವರಿ ಅಗತ್ಯವಿಲ್ಲ. ಇದನ್ನು ಬೇಸಿಗೆಯಲ್ಲಿ ಬಿತ್ತಿದರೆ, ಮಳೆಗಾಲ ಆರಂಭವಾಗುವ ಮೊದಲು ನೀರು ನೀಡಿದ್ರೆ ಸಾಕಾಗುತ್ತದೆ. 2 ಲಕ್ಷ ರೂಪಾಯಿ ಹೂಡಿಕೆ ಮಾಡಿ, 14 ಲಕ್ಷ ರೂಪಾಯಿ ಲಾಭ ಗಳಿಸಿದ ರೈತರ ಉದಾಹರಣೆಯಿದೆ. ಇದಕ್ಕೆ ಕೊಳೆ ಸಮಸ್ಯೆ ಅಷ್ಟಾಗಿ ಕಾಡುವುದಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read