ʼಅಪ್ಪುʼಗೆ ಮರೆಸುತ್ತೆ ನೋವು

ಹೊಸ ವರ್ಷ ಇರಲಿ, ಹುಟ್ಟು ಹಬ್ಬವಿರಲಿ ಆತ್ಮೀಯರನ್ನು ತಬ್ಬಿ ಶುಭಾಶಯ ಕೋತ್ತೇವೆ.

ತಬ್ಬಿಕೊಳ್ಳುವುದರಿಂದ ಇಬ್ಬರ ಸಂತಸವೂ ದ್ವಿಗುಣಗೊಳ್ಳುತ್ತದಂತೆ. ಹಾಗಿದ್ದರೆ ನಿಮ್ಮ ಸಂಗಾತಿಯನ್ನು ಈಗಲೇ ತಬ್ಬಿಕೊಳ್ಳಿ. ದಂಪತಿಗಳ ಮಧ್ಯೆ ವೈಮನಸ್ಸು ಉಂಟಾದಾಗ ಅದನ್ನು ಬಗೆಹರಿಸಿಕೊಳ್ಳಲು ತಬ್ಬಿಕೊಳ್ಳುವುದಕ್ಕಿಂತ ಉತ್ತಮವಾದ ಮಾರ್ಗ ಮತ್ತೊಂದಿಲ್ಲ.

ಪ್ರೀತಿಪಾತ್ರರನ್ನು ತಬ್ಬಿಕೊಂಡಾಗ ಮನಸ್ಸಿಗೆ ಸಂತೋಷವಾಗುವುದು ಮಾತ್ರವಲ್ಲ ಮಾನಸಿಕ ಶಾಂತಿಯೂ ದೊರೆಯುತ್ತದೆ. ಇದರಿಂದ ಸಾವಿನ ಭೀತಿಯೂ ಕಡಿಮೆಯಾಗುತ್ತದೆ ಎಂಬುದನ್ನು ವೈಜ್ಞಾನಿಕ ಸಂಶೋಧನೆಗಳು ದೃಢಪಡಿಸಿವೆ.

ನೋವನ್ನು ಕಡಿಮೆ ಮಾಡುವ ಶಕ್ತಿಯೂ ಅಪ್ಪುಗೆಗಿದೆ. ಇದರಿಂದ ದೇಹದಲ್ಲಿ ರಕ್ತ ಪರಿಚಲನೆ ಹೆಚ್ಚುತ್ತದೆ. ನೋವಿನ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಹೃದಯದ ಆರೋಗ್ಯವನ್ನೂ ಕಾಪಾಡುತ್ತದೆ. ಹಾಗಾಗಿ ಮುಜುಗರ ದೂರವಿಟ್ಟು ನಿಮ್ಮ ಪ್ರೀತಿಪಾತ್ರರನ್ನು ಇಂದೇ ತಬ್ಬಿಕೊಳ್ಳಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read