ಲಿವ್ ಇನ್ ಗೆಳತಿಗೆ ಏನೋ ಕಚ್ಚಿದೆ ಎಂದು ಎತ್ತಿಕೊಂಡು ಬಂದು ಆಸ್ಪತ್ರೆ ಬಾಗಿಲಲ್ಲಿ ಬಿಟ್ಟು ಎಸ್ಕೇಪ್ ಆದ ಯುವಕ: ಯುವತಿ ಸಾವು

ಭೋಪಾಲ್: ತನ್ನ ಲಿವ್ ಇನ್ ಗೆಳತಿಗೆ ಏನೋ ಕಚ್ಚಿದೆ ಎಂದು ಆಕೆಯನ್ನು ಹೊತ್ತುಕೊಂಡು ಬಂದ ಯುವಕ ಆಸ್ಪತ್ತೆಯೊಂದರ ಬಾಗಿಲ ಬಳಿ ಆಕೆಯನ್ನು ಬಿಟ್ಟು ಪರಾರಿಯಾಗಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ.

ಆಸ್ಪತ್ರೆ ಬಾಗಿಲ ಬಳಿ ಬಿಟ್ಟಿದ್ದ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳು. ಗ್ವಾಲಿಯರ್ ಜಿಲ್ಲಾ ಆಸ್ಪತ್ತೆಯಲ್ಲಿ ಈ ಘಟನೆ ನಡೆದಿದೆ. ಚೇತನ್ ಕುಕ್ರೇಜಾ ಎಂಬ ಯುವಕ ಹಾಗೂ ಬಿಹಾರ ಮೂಲದ ಯುವತಿ ಮಲನ್ ಪುರ್ ಪ್ರದೇಶದಲ್ಲಿ ಕಳೆದ ಮೂರು ವರ್ಷಗಳಿಂದ ಲಿವ್ ಇನ್ ಸಂಬಂಧದಲ್ಲಿದ್ದರು. ಇಬ್ಬರೂ ಒಂದೇ ಕಡೆ ಕೆಲಸ ಮಾಡುತ್ತಿದ್ದರು.

ಚೇತನ್ ಆಸ್ಪತ್ರೆಗೆ ಕರೆತಂದಾಗ ಸುಳ್ಳು ಹೆಸರು ಹೇಳಿದ್ದಾನೆ. ತನ್ನ ಗೆಳತಿಗೆ ತಡ ರಾತ್ರಿ ಯಾವುದೋ ವಿಷಕಾರಿ ಕೀಟ ಕಚ್ಚಿದೆ. ಆಕೆಯ ಸ್ಥಿತಿ ಗಂಭೀರವಾಗಿದೆ. ತಕ್ಷಣ ಚೇತನ್ ಗೆಳತಿಯನ್ನು ಆಟೋದಲ್ಲಿ ಕೂರಿಸಿಕೊಂಡು ಆಸ್ಪತ್ರೆ ಬಳಿ ಬಂದವನು ಆಟೋದಿಂದ ಗೆಳತಿಯನ್ನು ಎತ್ತಿಕೊಂಡು ಬಂದು ಆಸ್ಪತ್ರೆಯಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿ ಕಂಡು ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕಾಗಮಿಸಿ ಪೊಲೀಸರು ಯುವತಿ ತಪಾಸಣೆ ನಡೆಸಿದಾಗ ಯುವತಿ ಸಾವನ್ನಪ್ಪಿದ್ದಳು. ಸಿಸಿಟಿವಿ ಆಧರಿಸಿ ಆಟೋ ಸಂಖ್ಯೆ ಮೇಲೆ ಆರೋಪಿ ಚೇತನ್ ನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read