ಮಕ್ಕಳು ಮತ್ತು ಪ್ರಾಣಿಗಳನ್ನು ಒಳಗೊಂಡಿರುವ ವಿಡಿಯೋಗಳು ನೋಡಲು ಬಹಳ ಖುಷಿಯೆನಿಸುತ್ತದೆ. ಮಕ್ಕಳು-ಪ್ರಾಣಿಗಳು ಬಹಳ ಮುಗ್ಧರಾಗಿರುವುದರಿಂದ ನೋಡಲು ಉಲ್ಲಾಸದಾಯಕವಾಗಿರುತ್ತದೆ. ಇದೀಗ ಪುಟ್ಟ ಬಾಲಕಿ ಮತ್ತು ಜಿಂಕೆಯ ವಿಡಿಯೋವೊಂದು ವೈರಲ್ ಆಗಿದೆ.
ದ ಫಿಗೆನ್ ಮೂಲಕ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಜಿಂಕೆಯ ಮುಂದೆ ಬಾಲಕಿಯೊಬ್ಬಳು ಗೌರವಯುತವಾಗಿ ಬಾಗುತ್ತಿರುವುದನ್ನು ತೋರಿಸಲಾಗಿದೆ. ಜಿಂಕೆ ಕೂಡ ಹುಡುಗಿಯ ಕ್ರಿಯೆಗೆ ಪ್ರತಿಯಾಗಿ ನಮಸ್ಕರಿಸುತ್ತದೆ. ಪುಟ್ಟ ಬಾಲೆ ನಂತರ ಜಿಂಕೆಗೆ ಆಹಾರವನ್ನು ನೀಡಿ, ಧನ್ಯವಾದ ಎಂದು ಮತ್ತೊಮ್ಮೆ ತಲೆಬಾಗಿ ನಮಸ್ಕರಿಸುತ್ತಾಳೆ. ಜಿಂಕೆ ಕೂಡ ತಲೆಬಾಗಿ ನಮಸ್ಕರಿಸಿದೆ.
ಕೇವಲ 10 ಸೆಕೆಂಡ್ ಗಳಿರುವ ಈ ವಿಡಿಯೋ ಭಾರಿ ವೈರಲ್ ಆಗಿದೆ. ಇಬ್ಬರು ಮುಗ್ಧರಿಗೆ ಪರಸ್ಪರ ಭಾಷೆ ತಿಳಿದಿದೆ ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ವಿಡಿಯೋ ಹಲವಾರು ವೀಕ್ಷಣೆಗಳನ್ನು ಮತ್ತು ಟನ್‌ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ. ಇಬ್ಬರು ಮುಗ್ಧರ ನಡುವಿನ ಸಂಭಾಷಣೆಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಎಂತಹ ಸುಂದರವಾದ ಮೃದುತ್ವ ಮತ್ತು ಮುಗ್ಧತೆ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
Two innocents know each other's language! 💓💕pic.twitter.com/QgghxJ3NvG
— The Figen (@TheFigen_) May 23, 2023
https://twitter.com/barontrade11/status/1661388527760752642?ref_src=twsrc%5Etfw%7Ctwcamp%5Etweetembed%7Ctwterm%5E166138
Aww blessings and so much love❤️
— Mask pehno BC (@bhaiyawrr) May 23, 2023