HomeBusiness'ಎಣ್ಣೆ' ಪ್ರಿಯರಿಗೆ ಶಾಕಿಂಗ್ ನ್ಯೂಸ್: ಜು. 20 ರಿಂದ ಮದ್ಯ ದುಬಾರಿ; ಸಿಕ್ಸ್ಟಿಗೆ 20 ರೂ.ವರೆಗೆ...

‘ಎಣ್ಣೆ’ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಜು. 20 ರಿಂದ ಮದ್ಯ ದುಬಾರಿ; ಸಿಕ್ಸ್ಟಿಗೆ 20 ರೂ.ವರೆಗೆ ಹೆಚ್ಚಳ

ಬೆಂಗಳೂರು: ಜುಲೈ 20 ರಿಂದ ಮದ್ಯದ ದರ ದುಬಾರಿಯಾಗಲಿದೆ. 2023 -24ನೇ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡಿರುವಂತೆ ಮದ್ಯದ ಮೇಲಿನ ಸುಂಕ ಏರಿಕೆ ಜುಲೈ 20 ರಿಂದ ಜಾರಿಯಾಗಲಿದೆ.

ಅಂದಿನಿಂದ ಮದ್ಯದ ಬೆಲೆ ಹೆಚ್ಚಳ ಆಗಲಿದೆ. ಅಬಕಾರಿ ಮೇಲಿನ ಹೆಚ್ಚುವರಿ ಸುಂಕ ಹೆಚ್ಚಳ ಕುರಿತಾಗಿ ಸರ್ಕಾರದಿಂದ ಸೋಮವಾರ ಕರಡು ಪ್ರಕಟಿಸಲಾಗಿದ್ದು, 7 ದಿನಗಳೊಳಗೆ ಆಕ್ಷೇಪಣೆ ಸಲ್ಲಿಸಲು ಕೋರಲಾಗಿದೆ,

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಸ್ಕಿ, ರಂ, ಬ್ರಾಂಡಿ, ಜಿನ್ ಸೇರಿದಂತೆ ಎಲ್ಲಾ ಬಗೆಯ ಭಾರತೀಯ ಮದ್ಯದ ಮೇಲೆ ಎಲ್ಲಾ ಘೋಷಿತ 18 ಸ್ಲ್ಯಾಬ್ ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಹಾಲಿ ಇರುವ ದರಕ್ಕಿಂತ ಶೇಕಡ 20ರಷ್ಟು ಹೆಚ್ಚಳವಾಗಲಿದೆ. ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಶೇಕಡ 10ರಷ್ಟು ಹೆಚ್ಚಳ ಮಾಡಲಿದ್ದು, ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಶೇಕಡ 175 ರಿಂದ ಶೇಕಡ 185ರಷ್ಟು ಹೆಚ್ಚಳವಾಗಲಿದೆ.

ಭಾರತೀಯ ಮದ್ಯ 60 ಎಂಎಲ್ ಒಂದು ಪೆಗ್ ಗೆ 10 ರಿಂದ 20 ರೂಪಾಯಿ ಹೆಚ್ಚಳ ಆಗಲಿದೆ. ಬಿಯರ್ ಬೆಲೆ ಪ್ರತಿ ಬಾಟಲ್ ಗೆ ಮೂರರಿಂದ ಐದು ರೂಪಾಯಿ ಹೆಚ್ಚಳವಾಗಲಿದೆ ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular