HomeKarnatakaಮೊಬೈಲ್ ಗೆ ಬಂದ ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿಗೆ ಬಿಗ್ ಶಾಕ್: ಖಾತೆಯಲ್ಲಿದ್ದ 4 ಲಕ್ಷ...

ಮೊಬೈಲ್ ಗೆ ಬಂದ ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿಗೆ ಬಿಗ್ ಶಾಕ್: ಖಾತೆಯಲ್ಲಿದ್ದ 4 ಲಕ್ಷ ರೂ. ಮಾಯ

ದಾವಣಗೆರೆ: ಮೊಬೈಲ್ ಗೆ ಬಂದ ಪ್ಯಾನ್ ಅಪ್ಡೇಟ್ ಲಿಂಕ್ ಕ್ಲಿಕ್ ಮಾಡಿದ ದಾವಣಗೆರೆಯ ವ್ಯಕ್ತಿಯೊಬ್ಬರು 4.15 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಜನವರಿ 21ರಂದು ಘಟನೆ ನಡೆದಿದ್ದು, ಬುಧವಾರ ಸಿಇಎನ್ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ. ದಾವಣಗೆರೆಯ ದೇವರಾಜ ಅರಸು ಬಡಾವಣೆ ನಿವಾಸಿಯಾಗಿರುವ ವಿರೂಪಾಕ್ಷಪ್ಪ ವಂಚನೆಗೆ ಒಳಗಾದವರು. ಎಸ್.ಬಿ.ಐ. ನಲ್ಲಿ ಅವರು ಖಾತೆ ಹೊಂದಿದ್ದು, ಅವರ ಮೊಬೈಲ್ ಸಂಖ್ಯೆಗೆ ಜನವರಿ 21ರಂದು ರಾತ್ರಿ 10 ಗಂಟೆ ಸುಮಾರಿಗೆ ಎಸ್ಎಂಎಸ್ ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಸ್‌ಬಿಐ ಯೋನೋ ಅಪ್ಲಿಕೇಷನ್ ನಲ್ಲಿ ಪ್ಯಾನ್ ಅಪ್ ಡೇಟ್ ಮಾಡಲು ಲಿಂಕ್ ಒತ್ತಿ ಎಂದು ಅದರಲ್ಲಿ ತಿಳಿಸಲಾಗಿದ್ದು, ಲಿಂಕ್ ಕ್ಲಿಕ್ ಮಾಡಿದ ವಿರೂಪಾಕ್ಷಪ್ಪ ತಮ್ಮ ಖಾತೆಯ ಕುರಿತಾದ ಯಾವುದೇ ವಿವರ ನಮೂದಿಸಿಲ್ಲವಾದರೂ ಮರುದಿನ ಮಧ್ಯಾಹ್ನ ಅವರ ಖಾತೆಯಿಂದ ಹಣ ಕಡಿತವಾದ ಸಂದೇಶ ಮೊಬೈಲ್ ಗೆ ಬಂದಿದೆ.

ಕೂಡಲೇ ಅವರು ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ ಅವರ ಖಾತೆಯಿಂದ ಕ್ರಮವಾಗಿ 1.35 ಲಕ್ಷ ರೂ., 1 ಲಕ್ಷ ರೂ., 1.79 ಲಕ್ಷ ರೂ. ಸೇರಿದಂತೆ ಒಟ್ಟು 4.15 ಲಕ್ಷ ರೂ. ಕಡಿತವಾಗಿರುವುದಾಗಿ ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದಾರೆ. ಬಳಿಕ ವಿರೂಪಾಕ್ಷಪ್ಪ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular