HomeAstroʼಚಿನ್ನ' ಯೋಗ ಪ್ರಾಪ್ತಿಗಾಗಿ ಈ ಎಲೆಯ ಮೇಲೆ ದೀಪವನ್ನು ಬೆಳಗಿಸಿ

ʼಚಿನ್ನ’ ಯೋಗ ಪ್ರಾಪ್ತಿಗಾಗಿ ಈ ಎಲೆಯ ಮೇಲೆ ದೀಪವನ್ನು ಬೆಳಗಿಸಿ

ಬಂಗಾರವನ್ನು ಧರಿಸುವುದು ಹಾಗೂ ಖರೀದಿಸುವುದೆಂದರೆ ಮಹಿಳೆಯರಿಗೆ ತುಂಬಾ ಇಷ್ಟ. ಆದರೆ ಎಲ್ಲರಿಗೂ ಈ ಬಂಗಾರವನ್ನು ಕೊಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಅಂತವರು ಕೂಡ ಚಿನ್ನವನ್ನು ಖರೀದಿಸುವ ಯೋಗ ಪ್ರಾಪ್ತಿಯಾಗಬೇಕೆಂದರೆ ಈ ಪರಿಹಾರವನ್ನು ಮಾಡಿ.

ಚಿನ್ನ, ಲಕ್ಷ್ಮಿದೇವಿಯ ಸ್ವರೂಪ ಎನ್ನುತ್ತಾರೆ. ಲಕ್ಷ್ಮಿಯ ಅನುಗ್ರಹ ಯಾರ ಮೇಲೆ ಇರುತ್ತದೆಯೋ, ಅವರು ಚಿನ್ನವನ್ನು ಖರೀದಿಸಲು ಸಾಧ್ಯ. ಹಾಗಾಗಿ ಅಂತವರು ಈ ಎಲೆಯ ಮೇಲೆ ದೀಪವನ್ನು ಇಟ್ಟು ಲಕ್ಷ್ಮಿದೇವಿಯ ಪೂಜೆ ಮಾಡಿದರೆ ಲಕ್ಷ್ಮಿ ದೇವಿಯ ಕೃಪೆಯಿಂದ ಬಂಗಾರ ಯೋಗ ಪ್ರಾಪ್ತಿಯಾಗಿ ಬಂಗಾರವನ್ನು ಖರೀದಿಸಿ ಧರಿಸಬಹುದು.

ಮಹಿಳೆಯರು ಅಸುರಸಂಧ್ಯ (ಸಂಜೆ 6ರಿಂದ 7ಗಂಟೆಯೊಳಗೆ)ವೇಳೆಯಲ್ಲಿ ಚಿನ್ನವನ್ನು ಧರಿಸುವುದು, ತೆಗೆಯುವುದು, ಬೇರೆಯವರಿಗೆ ಕೊಡುವುದು ಮಾಡಬಾರದು. ಇದರಿಂದ ಲಕ್ಷ್ಮಿ ಅನುಗ್ರಹ ಕಡಿಮೆಯಾಗುತ್ತದೆ. ಹಾಗೇ ಬಾಳೆಮರದ ಕೆಳಗೆ ಲಕ್ಷ್ಮೀ ನಾರಾಯಣರ ಫೋಟೊ ಇಟ್ಟು ಅದಕ್ಕೆ ನಿಮ್ಮ ಚಿನ್ನವನ್ನು ಹಾಕಿ ಅದರ ಕೆಳಗೆ ಬಾದಾಮಿ ಎಲೆಯನ್ನು ಇಟ್ಟು ದೀಪವನ್ನು ಹಚ್ಚಿ ಬಾಳೆ ಹಣ್ಣನ್ನು ಅರ್ಪಿಸಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular