ಬೆಂಗಳೂರು : ಸಚಿವ ಹೆಚ್.ಕೆ ಪಾಟೀಲ್ ( H.K Patil) ಗೆ ಜೀವ ಬೆದರಿಕೆ ಹಾಕಿದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.
ಹೌದು. ಸಚಿವ ಹೆಚ್. ಕೆ ಪಾಟೀಲ್ ಅವರಿಗೆ ಫೇಸ್ ಬುಕ್ ನಲ್ಲಿ ಜೀವ ಬೆದರಿಕೆ ಹಾಕಲಾಗಿದ್ದು, ಆರೋಪಿಯನ್ನ ಬಂಧಿಸಿದ್ದಾರೆ.
ವೀರಣ್ಣ ಬೀಳಗಿ ಎಂಬಾತ ಸೋಶಿಯಲ್ ಮೀಡಿಯಾದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ್ದಾನೆ. ಸಚಿವರನ್ನು ಅವಹೇಳನಕಾರಿ ಪದಗಳಿಂದ ಬೈದು ಸಚಿವರನ್ನ ಎಕೆ 47 ನಿಂದ ಗುಂಡಿನ ಮಳೆಗೆರೆಯಬೇಕು ಎಂದಿದ್ದನು.
ಕಾಂಗ್ರೆಸ್ ಮುಖಂಡ ಬಿಬಿ ಅಸೂಟಿ ಅವರು ಗದಗ ನಗರದ ಬೆಟಗೇರಿ ಬಡಾವಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಆರೋಪಿ ರೋಣ ತಾಲೂಕಿನ ಸೂಡಿ ಗ್ರಾಮದ ನಿವಾಸಿ ವೀರಣ್ಣ ಬೀಳಗಿಯನ್ನ ಬಂಧಿಸಿದ್ದಾರೆ

