HomeLatest Newsಮಹಿಳೆಯರಿಗೆ 'LIC'ಯ ಬಂಪರ್ ಆಫರ್ : ಮನೆಯಲ್ಲೇ ಕುಳಿತು ತಿಂಗಳಿಗೆ ₹7,000 ಪಡೆಯಬಹುದು..!

ಮಹಿಳೆಯರಿಗೆ ‘LIC’ಯ ಬಂಪರ್ ಆಫರ್ : ಮನೆಯಲ್ಲೇ ಕುಳಿತು ತಿಂಗಳಿಗೆ ₹7,000 ಪಡೆಯಬಹುದು..!

ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಗುರಿಯಾಗಿಟ್ಟುಕೊಂಡು ಹೊಸ ಯೋಜನೆಯೊಂದನ್ನು ತಂದಿದೆ. ಭೀಮಾ ಸಖಿ ಯೋಜನೆ ಎಂಬ ಹೆಸರಿನಲ್ಲಿ ಪ್ರಾರಂಭಿಸಲಾದ ಈ ಯೋಜನೆಯ ಮೂಲಕ ಮಹಿಳೆಯರು ಮನೆಯಲ್ಲೇ ಇದ್ದುಕೊಂಡು ಸ್ಥಿರವಾದ ಮಾಸಿಕ ಆದಾಯವನ್ನು ಗಳಿಸಬಹುದು. ಡಿಸೆಂಬರ್ 2024 ರಲ್ಲಿ ನರೇಂದ್ರ ಮೋದಿ ಸರ್ಕಾರವು ಪ್ರಾರಂಭಿಸಿದ ಈ ಯೋಜನೆಯು ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸುವುದರ ಜೊತೆಗೆ ಗ್ರಾಮೀಣ ಹಾಗೂ ಕುಗ್ರಾಮಗಳಿಗೂ ವಿಮಾ ಸೇವೆಗಳನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ.

ಏನಿದು ಭೀಮಾ ಸಖಿ ಯೋಜನೆ?

ಈ ಯೋಜನೆಯಡಿ ಆಯ್ಕೆಯಾದ ಮಹಿಳೆಯರಿಗೆ ಎಲ್‌ಐಸಿ ವಿಶೇಷ ತರಬೇತಿಯನ್ನು ನೀಡುತ್ತದೆ. ಅವರು ವಿಮಾ ಏಜೆಂಟರಾಗಿ ಕಾರ್ಯನಿರ್వಹಿಸುತ್ತಾ, ಜನರಿಗೆ ಪಾಲಿಸಿಗಳ ಬಗ್ಗೆ ಅರಿವು ಮೂಡಿಸುತ್ತಾರೆ. ಈ ಪ್ರಕ್ರಿಯೆಯಲ್ಲಿ ಅವರಿಗೆ ಸ್ಟೈಪೆಂಡ್ (ಶಿಷ್ಯವೇತನ) ಜೊತೆಗೆ ಕಮಿಷನ್ ಕೂಡ ಸಿಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅರ್ಹತೆಗಳು:

  • ಕೇವಲ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬೇಕು.
  • ವಯಸ್ಸು 18 ರಿಂದ 70 ವರ್ಷದೊಳಗಿರಬೇಕು.
  • ಕನಿಷ್ಠ 10ನೇ ತರಗತಿ ತೇರ್ಗಡೆಯಾಗಿರಬೇಕು.

ಆರ್ಥಿಕ ಪ್ರಯೋಜನಗಳು:

ಈ ಯೋಜನೆಯಡಿ ಆಯ್ಕೆಯಾದ ಮಹಿಳೆಯರಿಗೆ 3 ವರ್ಷಗಳ ಕಾಲ ಸ್ಟೈಪೆಂಡ್ ಸಿಗುತ್ತದೆ.

  • ಮೊದಲನೇ ವರ್ಷ: ತಿಂಗಳಿಗೆ 7,000 ರೂ. ಸ್ಟೈಪೆಂಡ್.
  • ಎರಡನೇ ವರ್ಷ: ತಿಂಗಳಿಗೆ 6,000 ರೂ. ಸ್ಟೈಪೆಂಡ್. (ಮೊದಲ ವರ್ಷದಲ್ಲಿ ಕನಿಷ್ಠ 65 ಪ್ರತಿಶತ ಪಾಲಿಸಿಗಳನ್ನು ಪೂರ್ಣಗೊಳಿಸಿದರೆ ಮಾತ್ರ ಇದು ಅನ್ವಯಿಸುತ್ತದೆ).
  • ಮೂರನೇ ವರ್ಷ: ತಿಂಗಳಿಗೆ 5,000 ರೂ. ಸ್ಟೈಪೆಂಡ್.
  • ಕಮಿಷನ್: ಸ್ಟೈಪೆಂಡ್ ಜೊತೆಗೆ ಮೊದಲ ವರ್ಷದಲ್ಲಿ 48,000 ರೂ. ವರೆಗೆ ಕಮಿಷನ್ (ಬೋನಸ್ ಹೊರತುಪಡಿಸಿ) ಪಡೆಯುವ ಅವಕಾಶವಿದೆ.

ಅರ್ಜಿ ಸಲ್ಲಿಸುವ ವಿಧಾನ:

  • ಎಲ್‌ಐಸಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ಮುಖಪುಟದಲ್ಲಿ (ಹೋಮ್ ಪೇಜ್) “Click for Bima Sakhi” (ಕ್ಲಿಕ್ ಫಾರ್ ಭೀಮಾ ಸಖಿ) ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ಅರ್ಜಿ ನಮೂನೆಯಲ್ಲಿ ನಿಮ್ಮ ವಿವರಗಳನ್ನು ಸರಿಯಾಗಿ ನಮೂದಿಸಿ.
  • ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ಅರ್ಜಿಯನ್ನು ಸಲ್ಲಿಸಿ.
  • ನಿಮ್ಮ ಹತ್ತಿರದ ಎಲ್‌ಐಸಿ ಶಾಖಾ ಕಚೇರಿಗೂ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಯಾರು ಅನರ್ಹರು?

  • ಪ್ರಸ್ತುತ ಎಲ್‌ಐಸಿ ಏಜೆಂಟರಾಗಿ ಅಥವಾ ಉದ್ಯೋಗಿಗಳಾಗಿ ಕೆಲಸ ಮಾಡುತ್ತಿರುವವರು ಹಾಗೂ ಅವರ ಸಂಬಂಧಿಕರು.
  • ನಿವೃತ್ತ ಎಲ್‌ಐಸಿ ಉದ್ಯೋಗಿಗಳು ಮತ್ತು ಮಾಜಿ ಏಜೆಂಟರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular