HomeLatest Newsರಸಗೊಬ್ಬರ ಅಕ್ರಮ ದಾಸ್ತಾನು, ಹೆಚ್ಚಿನ ದರ, ಕೃತಕ ಅಭಾವ ಸೃಷ್ಟಿಸಿದರೆ ಲೈಸೆನ್ಸ್ ರದ್ದು

ರಸಗೊಬ್ಬರ ಅಕ್ರಮ ದಾಸ್ತಾನು, ಹೆಚ್ಚಿನ ದರ, ಕೃತಕ ಅಭಾವ ಸೃಷ್ಟಿಸಿದರೆ ಲೈಸೆನ್ಸ್ ರದ್ದು

ಧಾರವಾಡ: ರಸಗೊಬ್ಬರದ ಸಗಟು ಮಾರಾಟಗಾರರು ಹಾಗೂ ಚಿಲ್ಲರೆ ಮಾರಾಟಗಾರರು ತಮ್ಮ ಮಾರಾಟ ಕೇಂದ್ರಗಳ ಮುಂದೆ ತಮ್ಮ ಅಂದಿನ ರಸಗೊಬ್ಬರ ಮಾರಾಟ ದರ, ಅವತ್ತಿನ ದಾಸ್ತಾನು ಕುರಿತ ಮಾಹಿತಿ ಫಲಕವನ್ನು ಎಲ್ಲ ಗ್ರಾಹಕರಿಗೆ ಎದ್ದು ಕಾಣುವಂತೆ ದಪ್ಪ ಅಕ್ಷರಗಳಲ್ಲಿ ಪ್ರದರ್ಶಿಸುವುದು ಕಡ್ಡಾಯವಾಗಿದೆ. ನಿಗದಿಗಿಂತ ಹೆಚ್ಚಿನ ದರ ವಿಧಿಸುವುದು, ಅಕ್ರಮ ದಾಸ್ತಾನು ಹೊಂದುವುದು ಮತ್ತು ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸಿದರೆ ಅಂತಹ ಮಾರಾಟಗಾರರ ಲೈಸೆನ್ಸ್ ರದ್ದುಗೊಳಿಸಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಹೇಳಿದರು.

 ಅವರು ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಇಂದು ಜಿಲ್ಲೆಯ ಬೀಜ ಮತ್ತು ರಸಗೊಬ್ಬರ, ಕೀಟನಾಶಕ ಜೌಷಧಿಗಳ ಮಾರಾಟಗಾರರ ಹಾಗೂ ಸಗಟು ಮತ್ತು ಚಿಲ್ಲರೆ ಮಾರಾಟಗಾರರ, ರಸಗೊಬ್ಬರ ಕಂಪನಿಗಳ ಪ್ರತಿನಿಧಿಗಳ ಸಭೆ ನಡೆಸಿ ಮಾತನಾಡಿದರು.

 ರಸಗೊಬ್ಬರ ಉತ್ಪಾದನೆ ಹಾಗೂ ವಿತರಣಾ ಸಂಸ್ಥೆಗಳು ಕಡ್ಡಾಯವಾಗಿ ಸರಕು ಬರುವ ಮುಂಚಿತವಾಗಿ ಹಂಚಿಕೆ ಮಾಡುವ ಮಾರಾಟಗಾರರ ವಿವರವನ್ನು ಜಿಲ್ಲಾಡಳಿತಕ್ಕೆ ನೀಡಬೇಕು. ಮತ್ತು ಎಲ್ಲ ಉತ್ಪಾದನೆ ಸಂಸ್ಥೆಗಳು ಸರಕು ಬರುವ ಮಾಹಿತಿಯನ್ನು ಕಡ್ಡಾಯವಾಗಿ ಕೆಎಸ್‍ಎಸ್‍ಸಿ ಹಾಗೂ ಕೆಎಸ್‍ಸಿಎಂಎಫ್ ಸಂಸ್ಥೆಗಳಿಗೆ ಮುಂಗಡವಾಗಿ ತಿಳಿಸಿ, ಜಿಲ್ಲೆಗೆ ಹಂಚಿಕೆಯಾಗುವ ಪ್ರಮಾಣದಲ್ಲಿ ಶೇ. 25 ರಷ್ಟು ಕಾಪು ದಾಸ್ತಾನು ಅಡಿ ಸಂಗ್ರಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಸಗೊಬ್ಬರಕ್ಕೆ ಲಿಂಕ್ ಬೇಡ: ಸಹಾಯಧನ ಆಧಾರಿತ ರಸಗೊಬ್ಬರಗಳ ಜೊತೆ ಇನ್ನಾವುದೇ ಸಾವಯವ ಉತ್ಪನ್ನಗಳು, ಕೀಟನಾಶಕಗಳು, ನ್ಯಾನೋ ರಸಗೊಬ್ಬರ, ಸೂಕ್ಷ್ಮ ಪೋಷಕಾಂಶಗಳು, ಜೈವಿಕ ಉತ್ತೇಜಕಗಳು ಮತ್ತು ಯಾವುದೇ ಇತರೆ ಉತ್ಪನ್ನಗಳನ್ನು ಸಗಟು ಅಥವಾ ಚಿಲ್ಲರೆ ವ್ಯಾಪಾರಿಗಳಿಗೆ ಜೊಡಣೆ ಮಾಡಬಾರದು ಮತ್ತು ರೈತರಿಗೆ ರಸಗೊಬ್ಬರದೊಂದಿಗೆ ಒತ್ತಾಯ ಅಥವಾ ಕಡ್ಡಾಯವೆಂದು ಲಿಂಕ್ ಮಾಡಿ ಮಾರಾಟ ಮಾಡಬಾರದು.

 ರೈತರಿಗೆ ಬೇಡಿಕೆ ಅನುಸಾರವಾಗಿ ಅವರ ಎಫ್‍ಐಡಿ ಗೆ ದಾಖಲಿಸಿ ರಸಗೊಬ್ಬರ ನೀಡಬೇಕು. ಉತ್ಪದನಾ ಸಂಸ್ಥೆಗಳು ಯಾವುದೇ ನಿರೀಕ್ಷಿತ ಕೊರತೆಗಳಿದ್ದರೆ ಜಿಲ್ಲಾಡಳಿತಕ್ಕೆ ಲಿಖಿತವಾಗಿ ತಿಳಿಸಬೇಕು ಮತ್ತು ಯೂರಿಯಾ ರಸಗೊಬ್ಬರ ವರ್ಗಾವಣೆ ಮಾಡುವ ಅಪರಾಧಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.

ನಿಯಮ ಪಾಲನೆ ಕಡ್ಡಾಯ: ಸಗಟು ಮತ್ತು ಚಿಲ್ಲರೆ ರಸಗೊಬ್ಬರ ಮಾರಾಟಗಾರರು ಯೂರಿಯಾ ರಸಗೊಬ್ಬರವನ್ನು ಕಡ್ಡಾಯವಾಗಿ ಪಿಓಎಸ್ ಮಶಿನ್ ಮತ್ತು ಕೆ-ಕಿಸಾನ್ (ರೈತಮಿತ್ರ) ತಂತ್ರಾಂಶ ಮೂಲಕ ರೈತರಿಗೆ ಅವರ ಎಫ್‍ಐಡಿ ಆಧಾರಿತ ಜಮೀನಿನ ವಿಸ್ತೀರ್ಣದ ಮೇಲೆ ಒಂದು ತಿಂಗಳಿಗೆ ಒಂದು ಎಕರೆಗೆ ಒಂದು ಚೀಲದಂತೆ ಮಾರಾಟ ಮಾಡಬೇಕು. ಮತ್ತು ರಸಗೊಬ್ಬರಗಳ ಪರವಾನಿಗೆಯಲ್ಲಿ ಘೋಷಿಸದೇ ಇರುವ ಉಗ್ರಾಣ ಅಥವಾ ಸ್ಥಳಗಳಲ್ಲಿ ಸಂಗ್ರಹಣೆ ಮಾಡಿ ಮಾರಾಟ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ರಸಗೊಬ್ಬರಗಳ ಸಂಗ್ರಹಣೆ ಮತ್ತು ರಸಗೊಬ್ಬರಗಳ ದರಗಳು ಇರುವ ಫಲಕ ಹಾಕಬೇಕು. ನಿಗದಿತ ದರಗಳ ಪ್ರಕಾರ ರಸಗೊಬ್ಬರಗಳ ಮಾರಾಟ ಮಾಡಬೇಕು. ರೈತರ ರಸಗೊಬ್ಬರಗಳ ಖರೀದಿಗೆ ನಗದು ಅಥವಾ ಉದ್ರಿ ಬಿಲ್ ಕೊಟ್ಟು, ಅವರ ಸಹಿ ಪಡೆಯಬೇಕು. ರಸಗೊಬ್ಬರವನ್ನು ಕೃಷಿಯೇತರ ಉಪಯೋಗಕ್ಕೆ ಮಾರಾಟ ಮಾಡುವಂತಿಲ್ಲ. ಗೌಪ್ಯವಾಗಿ ರಸಗೊಬ್ಬರಗಳನ್ನು ಸಂಗ್ರಹಿಸಿ, ತಾತ್ಕಾಲಿಕ ಅಭಾವ ಸೃಷ್ಟಿಸಿ, ಹೆಚ್ಚಿನ ದರಗಳಲ್ಲಿ ರಸಗೊಬ್ಬರಗಳನ್ನು ಮಾರಾಟ ಮಾಡುವಂತಿಲ್ಲ. ಮತ್ತು ಎಲ್ಲ ಅಂಗಡಿಕಾರರು ಪಿಓಎಸ್ ಮಶಿನ್ ಮೂಲಕ ರಸೀದಿ ನೀಡಬೇಕೆಂದು ಜಿಲ್ಲಾಧಿಕಾರಿ ಹೇಳಿದರು.

ಕೃಷಿ ಇಲಾಖೆ ಅಧಿಕಾರಿಗಳು ಏಪ್ರೀಲ್ 13 ಮತ್ತು 14, 2026 ರಂದು ಅತಿ ಹೆಚ್ಚು ಯೂರಿಯಾ ರಸಗೊಬ್ಬರ ಸಗಟು ಮಾರಾಟ ಮಾಡಿರುವ ಜಿಲ್ಲೆಯ 103 ಮಾರಾಟ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ. 64 ಜನ ಮಾರಾಟಗಾರರಿಗೆ ಮಾರಾಟ ನಿಲ್ಲಿಸಲು ಸೂಚಿಸಿದ್ದಾರೆ. ಮತ್ತು 32 ಜನರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ. ನಿಯಮ ಉಲ್ಲಂಘಿಸಿರುವ 5 ಜನ ರಸಗೊಬ್ಬರ ಮಾರಾಟಗಾರರ ಲೈಸನ್ಸ್ ಅಮಾನತ್ತು ಮಾಡಿದ್ದಾರೆ.

 ಅದೇ ರೀತಿ ಅತಿ ಹೆಚ್ಚು ಡಿಎಪಿ ರಸಗೊಬ್ಬರ ಮಾರಾಟ ಮಾಡಿರುವ 95 ಜನ ಮಾರಾಟಗಾರರ ಅಂಗಡಿಗಳಿಗೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಈ ಪೈಕಿ 54 ಜನ ಮಾರಾಟಗಾರರಿಗೆ ರಸಗೊಬ್ಬರ ಮಾರಾಟ ನಿಲ್ಲಿಸಲು ಸೂಚಿಸಿದ್ದಾರೆ ಮತ್ತು 31 ಜನ ರಸಗೊಬ್ಬರ ಮಾರಾಟಗಾರರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಭೆ ನಿರ್ವಹಿಸಿದರು. ಉಪ ನಿರ್ದೇರ್ಶಕ ಸಂದೀಪ ಆರ್.ಜಿ. ಅವರು ಸ್ವಾಗತಿಸಿದರು. ಸಹಾಯಕ ಕೃಷಿ ಅಧಿಕಾರಿ ಪೂರ್ಣಿಮಾ ಮೇಘನ್ನವರ ವಂದಿಸಿದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular