HomeLatest Newsವೈನ್ ಶಾಪ್ ನುಗ್ಗಿ ರಾದ್ಧಾಂತ ಮಾಡಿದ ಚಿರತೆ: ಶಟರ್ ಎಳೆದು ಕಂಟ್ರೋಲ್ ಮಾಡಿದ ಸೇಲ್ಸ್‌ಮ್ಯಾನ್!

ವೈನ್ ಶಾಪ್ ನುಗ್ಗಿ ರಾದ್ಧಾಂತ ಮಾಡಿದ ಚಿರತೆ: ಶಟರ್ ಎಳೆದು ಕಂಟ್ರೋಲ್ ಮಾಡಿದ ಸೇಲ್ಸ್‌ಮ್ಯಾನ್!

ಸಾಮಾನ್ಯ ದಿನದಂತೆಯೇ ತೆರೆದಿದ್ದ ಮಧ್ಯದಂಗಡಿಯೊಂದಕ್ಕೆ ದಿಢೀರನೆ ಚಿರತೆಯೊಂದು ನುಗ್ಗಿ ಭೀತಿ ಸೃಷ್ಟಿಸಿದ ಘಟನೆ ರಾಜಸ್ಥಾನದ ಟೋಂಕ್ ಜಿಲ್ಲೆಯ ತೋಡಾರಾಯ್‌ಸಿಂಗ್ ಪ್ರದೇಶದಲ್ಲಿ ನಡೆದಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಕೊನೆಗೆ ಸುದೀರ್ಘ ಕಾರ್ಯಾಚರಣೆಯ ಬಳಿಕ ಚಿರತೆಯನ್ನು ಸುರಕ್ಷಿತವಾಗಿ ಸೆರೆಹಿಡಿಯಲಾಗಿದೆ.

ಬೆಟ್ಟಗುಡ್ಡಗಳ ಅರಣ್ಯ ಪ್ರದೇಶದಿಂದ ದಾರಿ ತಪ್ಪಿ ಬಂದ ಚಿರತೆಯು ಜನನಿಬಿಡ ಮಾರುಕಟ್ಟೆಗೆ ಆಗಮಿಸಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಈ ದೃಶ್ಯಾವಳಿಗಳಲ್ಲಿ ಚಿರತೆಯು ಏಕಾಏಕಿ ಅಂಗಡಿಯೊಳಗೆ ಜಿಗಿಯುವುದು, ಭೀತಿಯಿಂದ ಗ್ರಾಹಕರು ಹಾಗೂ ಸಿಬ್ಬಂದಿ ಓಡುವುದು ಸ್ಪಷ್ಟವಾಗಿ ಕಾಣಿಸುತ್ತದೆ.

ಸೇಲ್ಸ್‌ಮ್ಯಾನ್ ಚಾಣಾಕ್ಷತನದಿಂದ ತಪ್ಪಿದ ಅನಾಹುತ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವೈನ್ ಶಾಪ್‌ಗೆ ನುಗ್ಗಿದ ಚಿರತೆಯು ಅಲ್ಲಿನ ಸೇಲ್ಸ್‌ಮ್ಯಾನ್ ಸಂಜಯ್ ಗುರ್ಜರ್ ಅವರ ಮೇಲೆ ದಾಳಿ ನಡೆಸಿತು. ಬಾಟಲಿಗಳನ್ನು ಉರುಳಿಸಿ ರಾದ್ಧಾಂತ ಮಾಡಿದ ಚಿರತೆಯ ದಾಳಿಯಿಂದ ಸಂಜಯ್ ಅವರ ಮೂಗು, ಹೆಗಲು ಮತ್ತು ಕೈಗಳಿಗೆ ಗಾಯಗಳಾದವು. ಆದಾಗ್ಯೂ, ಧೈರ್ಯಗೆಡದ ಸಂಜಯ್, ಗಾಯಗೊಂಡ ಸ್ಥಿತಿಯಲ್ಲೇ ಅಂಗಡಿಯಿಂದ ಹೊರಬಂದು ಚಿರತೆಯನ್ನು ಒಳಗಡೆ ಹಾಕಿ ಹೊರಗಿನಿಂದ ಶಟರ್ ಎಳೆದಿದ್ದಾರೆ. ಅವರ ಈ ಚಾಣಾಕ್ಷ ನಿರ್ಧಾರದಿಂದಾಗಿ ಚಿರತೆ ಜನನಿಬಿಡ ಪ್ರದೇಶಕ್ಕೆ ನುಗ್ಗುವುದು ತಪ್ಪಿದೆ.

ಅಂಗಡಿಗೆ ನುಗ್ಗುವ ಮುನ್ನವೇ ಚಿರತೆಯು ಅರಣ್ಯ ಇಲಾಖೆಯ ಸ್ವಯಂಸೇವಕ ರಾಕೇಶ್ ಹಾಗೂ ಸ್ಥಳೀಯ ನಿವಾಸಿ ಫತೇ ಲಾಲ್ ಕೋಲಿ ಅವರ ಮೇಲೆಯೂ ದಾಳಿ ನಡೆಸಿತ್ತು. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಐದು ಗಂಟೆಗಳ ಬೃಹತ್ ಕಾರ್ಯಾಚರಣೆ

ಚಿರತೆ ಅಂಗಡಿಯೊಳಗೆ ಬಂದಿಯಾಗುತ್ತಿದ್ದಂತೆ ಸ್ಥಳೀಯ ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿ ಜಾಗವನ್ನು ಸುಪರ್ದಿಗೆ ತೆಗೆದುಕೊಂಡರು. ಬಳಿಕ ಜೈಪುರದಿಂದ ಆಗಮಿಸಿದ ನುರಿತ ವನ್ಯಜೀವಿ ರಕ್ಷಣಾ ತಂಡವು ಸುಮಾರು ಐದು ಗಂಟೆಗಳ ಕಾಲ ಶ್ರಮಿಸಿ, ಮಧ್ಯಾಹ್ನ ಎರಡು ಗಂಟೆಯ ಸುಮಾರಿಗೆ ಚಿರತೆಗೆ ಅರಿವಳಿಕೆ ಮದ್ದು ನೀಡಿ ಸುರಕ್ಷಿತವಾಗಿ ಬೋನಿಗೆ ಹಾಕುವಲ್ಲಿ ಯಶಸ್ವಿಯಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ತಮಾಷೆಯ ಕಾಮೆಂಟ್ಸ್‌

ಸಿಸಿಟಿವಿ ದೃಶ್ಯಾವಳಿಗಳು ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ವಿಚಿತ್ರವಾಗಿ ಪ್ರತಿಕ್ರಿಯಿಸಿದ್ದಾರೆ. “ವೈನ್ ಶಾಪ್ ಕೆಲಸಗಾರ ಚಿರತೆಯ ವಯಸ್ಸು ಕೇಳಿರಬೇಕು, ಅದಕ್ಕೆ ಕೋಪ ಬಂದು ದಾಳಿ ಮಾಡಿದೆ” ಎಂದು ಕೆಲವರು ತಮಾಷೆ ಮಾಡಿದರೆ, ಇನ್ನು ಕೆಲವರು “ಕುಡಿಯಲು ಬಂದಿದ್ದ ಚಿರತೆ ಬಳಿ ದುಡ್ಡು ಕೇಳಿದ್ದಕ್ಕೆ ಹೀಗಾಗಿದೆ” ಎಂದು ಕಾಲೆಳೆದಿದ್ದಾರೆ.

🚨 SHOCKING INCIDENT IN RAJASTHAN

​A wild leopard strayed from nearby hills into Todaraisingh town (Tonk) and charged straight inside a liquor shop near SBI Chauraha!

​The big cat went on a rampage—smashing bottles and attacking the salesman, leaving him with injuries to his… pic.twitter.com/EiAfd9OyAi

— Kailash Vashi (@KailashVashi) July 20, 2026

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular