ತಿರುಪತಿ ತಿಮ್ಮಪ್ಪನ ಭಕ್ತರಿಗೆ ಶಾಕ್: ಮೆಟ್ಟಿಲು ಮಾರ್ಗದಲ್ಲಿ ಕರಡಿ, ಚಿರತೆ ಪ್ರತ್ಯಕ್ಷ

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಮೆಟ್ಟಿಲು ಮಾರ್ಗದ ಮೂಲಕ ತೆರಳುವ ಭಕ್ತರಿಗೆ ಆತಂಕದ ಸುದ್ದಿ ಇಲ್ಲಿದೆ.

ಮೆಟ್ಟಿಲು ಮಾರ್ಗದಲ್ಲಿ ಚಿರತೆ, ಕರಡಿ ಕಾಣಿಸಿಕೊಂಡಿದ್ದು, ಮೆಟ್ಟಿಲು ಮಾರ್ಗದ ಮೂಲಕ ಸಂಚರಿಸುವ ಭಕ್ತರು ಎಚ್ಚರಿಕೆಯಿಂದ ಇರುವಂತೆ ಟಿಟಿಡಿ ತಿಳಿಸಿದೆ. ತಿರುಮಲಕ್ಕೆ ತೆರಳುವ ಮೆಟ್ಟಿಲು ಮಾರ್ಗದ ನಾರಾಯಣಸ್ವಾಮಿ ದೇವಾಲಯ ಮತ್ತು ಅಲಿಪಿರಿ ಬಳಿ ಚಿರತೆ ಹಾಗೂ ಕರಡಿ ಓಡಾಡಿದ್ದು, ಸಿಸಿಟಿವಿಯಲ್ಲಿ ದೃಶ್ಯಗಳು ಸೆರೆಯಾಗಿವೆ.

ಕೆಲವು ದಿನಗಳ ಹಿಂದೆ ಬಾಲಕಿಯನ್ನು ಚಿರತೆ ಕೊಂದು ಹಾಕಿತ್ತು. ನಂತರ ಅರಣ್ಯ ಇಲಾಖೆ ಸಿಬ್ಬಂದಿ ಐದು ಚಿರತೆಗಳನ್ನು ಸೆರೆ ಹಿಡಿದಿದ್ದರು. ಮಕ್ಕಳನ್ನು ಒಂಟಿಯಾಗಿ ಬಿಟ್ಟು ತೆರಳದಂತೆ, ಎಚ್ಚರಿಕೆಯಿಂದ ಇರುವಂತೆ ಟಿಟಿಡಿ ಸೂಚನೆ ನೀಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read