ಪ್ರಾಣಿಗಳಲ್ಲಿ ಯಾವ ಪ್ರಾಣಿ ಉತ್ತಮ ಬೇಟೆಗಾರ ಎಂದು ಮಾತನಾಡುವುದಾದರೆ, ಬೆಕ್ಕಿನ ಕುಟುಂಬಕ್ಕೆ ಮೊದಲ ಸ್ಥಾನ. ಅಂದರೆ ಚಿರತೆ, ಹುಲಿ, ಸಿಂಹ ಇತ್ಯಾದಿ. ಇವೆಲ್ಲವೂ ಬೆಕ್ಕಿನ ಜಾತಿಯ ಸದಸ್ಯರು. ಕೆಲವು ನಂಬಲಾಗದ ಬೇಟೆಗಳನ್ನು ಬೇಟೆಯಾಡುವ ಮೂಲಕ ಇವು ಅಚ್ಚರಿಗೊಳಿಸುವುದು ಇದೆ.
ಸಾಮಾಜಿಕ ಮಾಧ್ಯಮಗಳು ಸಕ್ರಿಯವಾಗಿರುವ ಈ ಹೊತ್ತಿನಲ್ಲಿ, ಕೆಲವು ರೋಚಕ ಹಾಗೂ ಕೆಲವು ಭಯಾನಕ ಬೇಟೆಯ ದೃಶ್ಯಗಳನ್ನು ನಾವು ಕಾಣಬಹುದಾಗಿದೆ.
ಅಂಥದ್ದೇ ಒಂದು ವಿಡಿಯೋ ಈಗ ವೈರಲ್ ಆಗಿದೆ. ಚಿರತೆಯೊಂದು ಮಂಗನ ಬೇಟೆಯಾಡುವ ಮೈ ಜುಂ ಎನಿಸುವ ವಿಡಿಯೋ ಇದಾಗಿದೆ.
ಒಂದು ಮರದಿಂದ ಇನ್ನೊಂದು ಮರಕ್ಕೆ ಜಿಗಿಯುತ್ತಿರುವ ಮಂಗಗಳನ್ನು ಹಿಂಬಾಲಿಸುವ ಚಿರತೆ ನಂತರ ತಾನೂ ಹೇಗೆ ಮಂಗನಂತೆಯೇ ಮರದಿಂದ ಮರಕ್ಕೆ ಹಾರಿ ಅದನ್ನು ಹಿಡಿಯುತ್ತದೆ ಎನ್ನುವುದನ್ನು ವಿಡಿಯೋದಲ್ಲಿ ನೋಡಬಹುದು.
ಇದನ್ನು ನೋಡಿದರೆ ಮೈಯೆಲ್ಲಾ ಝುಂ ಎನ್ನುವುದು ಖಂಡಿತ. ವಾಸ್ತವವಾಗಿ, ಚಿರತೆ ಮರಗಳನ್ನು ಹತ್ತುವುದರಲ್ಲಿ ಮತ್ತು ನೆಗೆಯುವುದರಲ್ಲಿ ಹೆಚ್ಚು ಪ್ರವೀಣ. ಆದರೆ ಇದಕ್ಕಿಂತಲೂ ಮಂಗಗಳು ಮರದಿಂದ ಮರಕ್ಕೆ ಜಿಗಿಯುವಲ್ಲಿ ಪ್ರವೀಣ ಎಂದುಕೊಂಡ ಊಹೆಯನ್ನು ತಪ್ಪಾಗಿಸಿದೆ ಈ ಘಟನೆ.
Leopards are not only opportunistic but versatile hunters. pic.twitter.com/bYGxGLFJqr
— Susanta Nanda (@susantananda3) April 6, 2023