ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಿದ್ರೆ ‘ಕಾನೂನು ಕ್ರಮ’ : ಖಾಸಗಿ ವಾಹನಗಳಿಗೆ ‘ಸಾರಿಗೆ ಇಲಾಖೆ’ ಖಡಕ್ ಎಚ್ಚರಿಕೆ

ಬೆಂಗಳೂರು : ಪ್ರಯಾಣಿಕರು ದುಪ್ಪಟ್ಟು ಹಣ ವಸೂಲಿ ಮಾಡಿದ್ರೆ ‘ಕಾನೂನು ಕ್ರಮ’ ಕೈಗೊಳ್ಳುವುದಾಗಿ ಖಾಸಗಿ ವಾಹನಗಳಿಗೆ ‘ಸಾರಿಗೆ ಇಲಾಖೆ’ ಖಡಕ್ ಎಚ್ಚರಿಕೆ ನೀಡಿದೆ.

ಈ ಬಗ್ಗೆ ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ, ಬೆಂಗಳೂರು ಇವರು ಸೂಚನೆ ನೀಡಿದ್ದು, ಇತ್ತೀಚಿನ ದಿನಪತ್ರಿಕೆಗಳಲ್ಲಿ ವಾರಾಂಶ ಹಬ್ಬ ಹರಿದಿನಗಳಂದು ಖಾಸಗಿ ಪ್ರಯಾಣಿಕರ ವಾಹನಗಳ ಪ್ರಯಾಣ ದರಗಳಲ್ಲಿ ವಿಪರೀತ ಹೆಚ್ಚಳ ಮಾಡಿ ಪ್ರಯಾಣಿಕರ ಸುಲಿಗೆ ಮಾಡುತ್ತಿರುವ ಕುರಿತು ವರದಿಯಾಗಿರುತ್ತದೆ. ಹಾಗೂ ಇದೇ ವಿಷಯದ ಕುರಿತು ಸಾರಿಗೆ ಇಲಾಖೆಗೆ ಸಾರ್ವಜನಿಕರಿಂದ ಹಲವು ದೂರುಗಳು ಸಹ ಬಂದಿರುತ್ತವೆ,

ಆದ್ದರಿಂದ  ಖಾಸಗಿ ಪ್ರಯಾಣಿಕರ ವಾಹನಗಳ ಮಾಲೀಕರುಗಳು ಮತ್ತು ಆನ್ಲೈನ್ ಟಿಕೆಟ್ ನೀಡುವ ವಿತರಕರಿಗೆ ವಾರಾಂತ್ಯ, ಹಾಗೂ ಸರದಿ ಹಬ್ಬ ಹರಿದಿನಗಳಲ್ಲಿ ಪ್ರಯಾಣ ದರಗಳಲ್ಲಿ ವಿಪರೀತ ಹೆಚ್ಚಳ ಮಾಡಿ ಪುಯಾಣಿಕರಿಗಾಗುವ ಅನಾನುಕೂಲತೆ ಮಾಡಬಾರದೆಂದು ಹಾಗೂ ಪ್ರಯಾಣಿಕರ ವಾಹನಗಳಲ್ಲಿ ಇತರ ಸರಕುಗಳನ್ನು ಅನಧಿಕೃತವಾಗಿ ಸಾಗಿಸದಿರಲು ಈ ಮೂಲಕ ತಿಳಿಸಲಾಗಿದೆ. ಮುಂದುವರೆದು ಇಂತಹ ಪ್ರಕರಣಗಳು ಕಂಡುಬಂದಲ್ಲಿ ವಾಹನ ಮಾಲೀಕರ / ಆನ್ಲೈನ್ ಟಿಕೆಟ್ ನೀಡುವ ವಿತರಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದೆಂದು ಈ ಮೂಲಕ ತಿಳಿಸಲಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read