ಬೆಂಗಳೂರು: ನೈಸ್ ರಸ್ತೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ವಕೀಲನ ಶವ ಪತ್ತೆಯಾಗಿದೆ. ಬನ್ನೇರುಘಟ್ಟ- ಕನಕಪುರ ನೈಸ್ ರಸ್ತೆಯಲ್ಲಿ ವಕೀಲ ಜಗದೀಶ್ ಶವ ಪತ್ತೆಯಾಗಿದೆ.
ಜಗದೀಶ್ ಕಾರ್ ನಿಂತಿದ್ದ 200 ಮೀಟರ್ ದೂರದಲ್ಲಿ ಮೃತದೇಹ ಬಿದ್ದಿದೆ. ಕಾರ್ ನ ಹಲವೆಡೆ ಅಪಘಾತವಾದ ಗುರುತುಗಳು ಪತ್ತೆಯಾಗಿದೆ. ನಿನ್ನೆ ಸಂಜೆ 7:30 ರಿಂದ 8 ಗಂಟೆ ಸುಮಾರಿಗೆ ಜಗದೀಶ್ ಶವ ಪತ್ತೆಯಾಗಿದೆ.
ಕಾರು ಟಚ್ ಆಗಿರುವ ವಿಚಾರಕ್ಕೆ ಗಲಾಟೆಯಾಗಿ ಕೊಲೆ ನಡೆದಿದೆಯೇ ಅಥವಾ ಉದ್ದೇಶಪೂರ್ವಕವಾಗಿ ಕೊಲೆ ಮಾಡಲಾಗಿದೆಯೇ? ಇಲ್ಲವೇ ಅಪಘಾತ ನಡೆದಿದೆಯೇ ಎಂಬುದರ ಕುರಿತಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಕೆಂಗೇರಿ ಪೊಲೀಸರು ಪರಿಶೀಲಿಸಿದ್ದಾರೆ. ಮೇಲ್ನೋಟಕ್ಕೆ ಕೊಲೆಯಾದ ರೀತಿ ಕಾಣಿಸುತ್ತಿದೆ ಎನ್ನಲಾಗಿದ್ದು, ಘಟನೆ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.